BANTWAL
ಬಂಟ್ವಾಳ – ಖಾಸಗಿ ಬಸ್ ನಿಂದ ಹೊರಗೆಸೆಯಲ್ಪಟ್ಟ ವಿಧ್ಯಾರ್ಥಿನಿಗೆ ಗಂಭೀರ ಗಾಯ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಬಂಟ್ವಾಳ ಮಾರ್ಚ್ 01 : ಖಾಸಗಿ ಬಸ್ ನಿಂದ ಹೊರಗೆ ಎಸೆಯಲ್ಪಟ್ಟ ವಿಧ್ಯಾರ್ಥಿನಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ನೆ ಬಿ.ಸಿ.ರೋಡಿನಲ್ಲಿ ನಡೆದಿದೆ.
ಗಾಯಗೊಂಡವರನ್ನು ಪಾಣೆಮಂಗಳೂರು ಗ್ರಾಮದ ಗುಡ್ಡೆಯಂಗಡಿ ನಿವಾಸಿ ಮುಹಮ್ಮದ್ ರಫೀಕ್ ಎಂಬವರ ಮಗಳು ಅಪ್ಸನಾ ಎಂದು ಗುರುತಿಸಲಾಗಿದೆ. ಗಾಯಾಳು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .
ಬೆಳಗ್ಗೆ ಸುಮಾರು 9.30 ಗಂಟೆಗೆ ಅಪ್ಸನಾ ಹೋಗುತ್ತಿದ್ದ ಬಸ್ ಚಾಲಕ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಬಸ್ ನಿಂದ ಇಳಿಯಲು ಡೋರ್ ಬಳಿ ನಿಂತಿದ್ದ ವಿದ್ಯಾರ್ಥಿನಿ ಬಸ್ನಿಂದ ಒಮ್ಮೆಲೆ ಹೊರೆಗೆ ಎಸೆಯಲ್ಪಟ್ಟರು ಎನ್ನಲಾಗಿದೆ. ರಸ್ತೆಗೆ ಬಿದ್ದು ಆಕೆಯ ತಲೆಗೆ ಗಂಭೀರ ಗಾಯವಾಗಿದೆ. ಮಂಗಳೂರು ನಗರದ ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
You must be logged in to post a comment Login