LATEST NEWS
ಬಂಟ್ವಾಳ: ಸಿಡಿಲು ಬಡಿದು ಇಬ್ಬರಿಗೆ ಗಾಯ

ಬಂಟ್ವಾಳ, ಮೇ 18 : ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲಮುಡ್ನೂರು ಗ್ರಾಮದಲ್ಲಿ ಇಂದು ಸಂಭವಿಸಿದೆ.
ವಿಟ್ಲಮುಡ್ನೂರು ಗ್ರಾಮದ ಪೈಸಾರಿ ನಿವಾಸಿಗಳಾದ ರಮಾವತಿ, ಶ್ಯಾಮಲ ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಪೈಸಾರಿ ಗೋಪಾಲಕೃಷ್ಣ ನಾಯಕ್ ಅವರ ಮನೆಗೆ ಸಿಡಿಲು ಬಡಿದಿತ್ತು.

ಮನೆಯ ಮೇಲ್ಛಾವಣಿ ಕುಸಿದು ಸುಮಾರು ರೂ.50 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಗ್ರಾಮಕರಣಿಕ ಕರಿಬಸಪ್ಪ, ಸಹಾಯಕ ರುಕ್ಮಯ ಭೇಟಿ ನೀಡಿದ್ದಾರೆ.