Connect with us

    BANTWAL

    ಬಂಟ್ವಾಳ – ಕೋಳಿ ಅಂಕದಲ್ಲಿ ಕುಸಿದು ಬಿದ್ದ ವೀಕ್ಷಕರ ಗ್ಯಾಲರಿ – ಕೆಲವರಿಗೆ ಗಾಯ

    ಬಂಟ್ವಾಳ ನವೆಂಬರ್  09 : ಕೋಳಿ ಅಂಕ ನಡೆಯುತ್ತಿದ್ದ ಸ್ಥಳದಲ್ಲಿ ಹಾಕಲಾಗಿದ್ದ ವೀಕ್ಷಕರ ಗ್ಯಾಲರಿ ಕುಸಿದು ಬಿದ್ದು ಕೆಲವರು ಗಾಯಗೊಂಡ ಘಟನೆ ಕಲ್ಲಡ್ಕ ಸಮೀಪದ ಸುಧೇಕಾರು ಎಂಬಲ್ಲಿ ಬುಧವಾರ ನಡೆದಿದೆ.


    ಎರಡು ಬದಿ ಗ್ಯಾಲರಿ ಅಳವಡಿಸಿ ಕೋಳಿ ಅಂಕ ನಡೆಸುತ್ತಿದ್ದ ವೇಳೆ ಒಂದು ಬದಿ ಗ್ಯಾಲರಿ ಕುಸಿತಗೊಂಡಿದೆ. ಇದರಿಂದಾಗಿ ನಾಲ್ವರು ಗಾಯಗೊಂಡಿದ್ದು, ಒಬ್ಬ ವ್ಯಕ್ತಿ ಕಾಲಿಗೆ ಗಂಭೀರ ಗಾಯಗೊಂಡಿದೆ. ಈ ಕೋಳಿ ಅಂಕಕ್ಕೆ ಪೊಲೀಸರಿಂದ ಪರವಾನಿಗೆ ಪಡೆಯದ ಹಿನ್ನೆಲೆಯಲ್ಲಿ ಆಯೋಜಕರು ಕೂಡಲೇ ಕೋಳಿ ಅಂಕ ಸ್ಥಗಿತಗೊಳಿಸಿದರು. ಇದೇ ರೀತಿ ತಾಲ್ಲೂಕಿನ ವಿವಿಧೆಡೆ ಗ್ಯಾಲರಿ ಅಳವಡಿಸಿ ಮೂರು ದಿನಗಳ ಹೊನಲು ಬೆಳಕಿನ ಕೋಳಿ ಅಂಕ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply