BANTWAL
ಬಂಟ್ವಾಳ – ಡಿವೈಡರ್ ಮೇಲೆ ಹುಲ್ಲು ತೆಗೆಯುತ್ತಿದ್ದ ಕಾರ್ಮಿಕನಿಗೆ ಗುದ್ದಿದ ಕಾರು
ಬಂಟ್ವಾಳ ಸೆಪ್ಟೆಂಬರ್ 19 : ಡಿವೈಡರ್ ನ ಹುಲ್ಲು ತೆಗೆಯುತ್ತಿದ ಕಾರ್ಮಿಕನ ಮೇಲೆ ಕಾರೊಂದು ಹರಿದ ಪರಿಣಾಮ ಕಾರ್ಮಿಕ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತುಂಬೆ ಎಂಬಲ್ಲಿ ನಡೆದಿದೆ. ಹಾವೇರಿ ಮೂಲದ ನಾಗರಾಜ್ ಲಮಾಣಿ ಗಾಯಗೊಂಡ ಕಾರ್ಮಿಕ.
ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಡಿವೈಡರ್ ಮೇಲೆ ಹತ್ತಿದೆ. ಈ ಸಂದರ್ಭದಲ್ಲಿ ಡಿವೈಡರ್ ನಲ್ಲಿ ಹುಲ್ಲು ತೆಗೆಯುವ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಡಿಕ್ಕಿಯಾಗಿದೆ. ಬಳಿ ಕಾರು ವಿರುದ್ದ ರಸ್ತೆಗೆ ಮುನ್ನುಗ್ಗಿದೆ.
ಅದೇ ಸಮಯದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಕಾರು ಮತ್ತು ಬೈಕ್ ಎರಡು ವಾಹನಗಳ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಹಾಗೂ ಬೈಕ್ ಜಖಂಗೊಂಡಿದೆ. ಅದರೆ ಎರಡು ವಾಹನದಲ್ಲಿದ್ದ ಸವಾರರಿಗೆ ಯಾವುದೇ ಗಾಯವಾಗಿಲ್ಲ. ಡಿವೈಡರ್ ಮೇಲೆ ಗಾಯಗೊಂಡ ಕೂಲಿ ಕಾರ್ಮಿಕನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ನೀಡಲಾಗುತ್ತಿದೆ.
You must be logged in to post a comment Login