BANTWAL
ಬಂಟ್ವಾಳ – ಚರಂಡಿಗೆ ಬಿದ್ದ ಆಟೋ ರಿಕ್ಷಾ, ಚಾಲಕ ಸಾವು

ಬಂಟ್ವಾಳ ಫೆಬ್ರವರಿ 15: ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ ಆಟೋ ಚಾಲಕ ಸಾವನಪ್ಪಿ ಆಟೋದಲ್ಲಿದ್ದ ಮೂವರು ಮಕ್ಕಳು ಗಾಯಗೊಂಡ ಘಟನೆ ಅಮ್ಮುಂಜೆ ಗ್ರಾಮದ ಗಾಣೆಮಾರ್ ಎಂಬಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಮೃತರನ್ನು ರಿಕ್ಷಾ ಚಾಲಕ ಅಮ್ಮುಂಜೆ ನಿವಾಸಿ ಮಹಾಬಲ ಪೂಜಾರಿ ( 37) ಎಂದು ಗುರುತಿಸಲಾಗಿದೆ. ಈತನ ಸಂಬಂಧಿಗಳಾದ ತುಷಾರ್,ಭವಿತ್ ಮತ್ತು ಪ್ರದೀಪ್ ಎಂಬವರು ಗಾಯಗೊಂಡ ಮಕ್ಕಳು. ಮೂಡಬಿದಿರೆಯ ಮಿಜಾರು ಎಂಬಲ್ಲಿಗೆ ಜಾತ್ರೆಗೆ ಹೋಗಿ ಮರಳುವ ವೇಳೆ ಮನೆಗೆ ಸುಮಾರು 500 ಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ರಿಕ್ಷಾ ತಲೆಕೆಳಗಾದ ಸ್ಥಿತಿಯಲ್ಲಿ ಚರಂಡಿಗೆ ಬಿದ್ದಿದೆ. ಮೂವರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಬಂಟ್ವಾಳ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
