Connect with us

    BANTWAL

    ಬಂಟ್ವಾಳ – ಸ್ಕೂಟರ್ ಗೆ ಕಾರು ಡಿಕ್ಕಿ ಓರ್ವ ಸಾವು ಮತ್ತೊರ್ವ ಗಂಭೀರ

    ಬಂಟ್ವಾಳ ಮಾರ್ಚ್ 13: ಸ್ಕೂಟರ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನಪ್ಪಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳ ಸಮೀಪದ ರಾಯಿ ಎಂಬಲ್ಲಿ ನಡೆದಿದೆ. ಮೃತರನ್ನು ಬಂಟ್ವಾಳ ಬೈಪಾಸ್ ನಿವಾಸಿ ವಿದ್ಯುತ್ ಗುತ್ತಿಗೆದಾರ ಚಂದ್ರಶೇಖರ ಎಂದು ಗುರುತಿಸಲಾಗಿದ್ದು.ಬಂಟ್ವಾಳ ನಿವಾಸಿ ಇಡ್ಲಿ ಯೋಗೀಶ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.


    ಬೈಕಿನಲ್ಲಿ ಸಿದ್ದಕಟ್ಟೆಯಿಂದ ಬಂಟ್ವಾಳ ಕಡೆ ಬರುತ್ತಿದ್ದಾಗ ಸುಮಾರು 11 ಗಂಟೆ ವೇಳೆಗೆ ರಾಯಿ ಎಂಬಲ್ಲಿ ಹಿಂಬದಿಯಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನದ ಹಿಂಬದಿ ಸವಾರ ಚಂದ್ರಶೇಖರ ಅವರು ರಸ್ತೆಗೆ ಎಸೆಯಲ್ಪಟ್ಟು ಸಾವನ್ನಪ್ಪಿದ್ದಾರೆ.

    ಬೈಕ್ ಚಾಲಕ ಯೋಗೀಶ್ ಅವರ ತಲೆಗೆ ಗಂಭೀರವಾಗಿ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲಕನ ಅತಿವೇಗದ ಹಾಗೂ ಅಜಾಗರೂಕತೆಯ ಚಾಲನೆಯೆ ಘಟನೆ ಗೆ ಕಾರಣ ಎನ್ನಲಾಗಿದೆ.
    ಮೆಲ್ಕಾರ್ ಸಂಚಾರಿ ಠಾಣಾಧಿಕಾರಿ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply