LATEST NEWS
ಬಂಟ್ವಾಳ : ಮನೆಗೆ ಡಿಕ್ಕಿ ಹೊಡೆದ ಮೆಸ್ಕಾಂನ ಪಿಕಪ್ ವಾಹನ…!!
ಬಂಟ್ವಾಳ ನವೆಂಬರ್ 27: ಕಾರಿನ ಡಿಕ್ಕಿಗೆ ಹೊಡೆಯುವುದನ್ನು ತಪ್ಪಿಸಲು ಹೋದ ಪಿಕಪ್ ಒಂದು ಮನೆಯೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಬಂಟ್ವಾಳ ಸಮೀಪದ ಮಣಿಹಳ್ಳ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.
ಪುಂಜಾಲಕಟ್ಟೆಯಿಂದ ಬರುತ್ತಿದ್ದ ಕಾರು ಬಂಟ್ವಾಳ ಕಡೆಯಿಂದ ಬರುತ್ತಿದ್ದ ಮೆಸ್ಕಾಂ ಇಲಾಖೆಗೆ ಸೇರಿದ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ತಪ್ಪಿಸಲು ಪ್ರಯತ್ನಿಸಿದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮನೆಗೆ ನುಗ್ಗಿದೆ.
ಘಟನೆಯಿಂದ ಲಕ್ಷಣ್ ಎಂಬವರ ಮನೆಯ ಗೋಡೆ ಜರಿದು ಬಿದ್ದಿದ್ದು ಬೇರೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
You must be logged in to post a comment Login