Connect with us

    LATEST NEWS

    ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ – ವರದಿಗೆ ತೆರಳಿದ ಮಾಧ್ಯಮಗಳನ್ನು ತಳ್ಳಿ ಪುಂಡಾಟ

    ಮಂಗಳೂರು ಡಿಸೆಂಬರ್ 04 : ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ, ಸಾಧು ಸಂತರ ರಕ್ಷಣೆಗೆ ಆಗ್ರಹಿಸಿ ದ.ಕ ಜಿಲ್ಲಾ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.


    ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆಯ ಮಿನಿ ವಿಧಾನ ಸೌಧದ ವರೆಗೆ ಮೆರವಣಿಗೆಯ ಅನಂತರ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನೆ ಹಿನ್ನಲೆ ರಸ್ತೆ ತಡೆ ನಡೆಸಲು ಹಿಂದೂ ಸಂಘಟನೆಯ ಕಾರ್ಯಕರ್ತರು ಮುಂದಾದರು. ತಡೆಯಲು ಹೋದ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದೆ. ಅಲ್ಲದೆ ರಸ್ತೆ ತಡೆ ಮಾಡುತ್ತಿದ್ದ ದೃಶ್ಯ ಸೆರೆ ಹಿಡಿಯುತ್ತಿದ್ದ ಮಾಧ್ಯಮಗಳ ಮೇಲೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ. ಮಾಧ್ಯಮದವರನ್ನು ತಳ್ಳಾಡಿದ ಘಟನೆ ನಡೆದಿದೆ.

    ಪ್ರತಿಭಟನೆಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಬಾಂಗ್ಲಾದಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದೆ. ಇಸ್ಲಾಂ ಜಿಹಾದಿ ಸಂಘಟನೆ ಇದ್ದರೆ ಏನಾಗಬಹುದು ಎಂಬುದಕ್ಕೆ ಬಾಂಗ್ಲಾದೇಶದ ಉದಾಹರಣೆ ನಮ್ಮಮುಂದೆ ಇದೆ. ಹಿಂದೂಗಳು, ಅಲ್ಪಸಂಖ್ಯಾತರ ಮೇಲೆ ಎರಡು ತಿಂಗಳಲ್ಲಿ ಆರು ಸಾವಿರ ದಾಳಿಗಳು ನಡೆದಿವೆ. ಹಿಂದೂಗಳ ಮೇಲಿನ ದಾಳಿಯ ಹಿಂದೆ ಅಂತರರಾಷ್ಟ್ರೀಯ ಮಟ್ಟದ ಷಡ್ಯಂತ್ರ ಅಡಗಿದೆ. ಜಗತ್ತನ್ನು ಇಸ್ಲಾಮೀಕರಣ ಮಾಡಬೇಕೆಂದು ಹಿಂದುತ್ವದ ನಾಶ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಇಸ್ಲಾಂ ಅಧಿಕಾರ ಹಿಡಿದ ಯಾವ ದೇಶವನ್ನೂ ಬಿಟ್ಟಿಲ್ಲ, ಅಲ್ಲಿಯ ಸಂಸ್ಕೃತಿ, ನಾಗರಿಕತೆ, ಪರಂಪರೆ ನಾಶ ಮಾಡಿದೆ. ಭಾರತದ ಹಿಂದೂಗಳಿಗೆ ಇದು ಪಾಠವಾಗಿದೆ’ ಎಂದರು. ಹಿಂದೂಗಳ ಜನಸಂಖ್ಯೆ ಕಡಿಮೆ ಆದಲ್ಲೆಲ್ಲ ಹಿಂದೂಗಳು ಪೆಟ್ಟು ತಿನ್ನುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯನ್ನೇ ಗಮನಿಸಿದರೆ ಅವರ ಜನಸಂಖ್ಯೆ ಶೇ 35ಕ್ಕೆ ಬಂದಿದೆ. ನಾಳೆ ಇಲ್ಲಿಗೂ ಬಾಂಗ್ಲಾದೇಶದ ಪರಿಸ್ಥಿತಿ ಬರಬಹುದು ಎಂಬುದನ್ನು ಜಿಲ್ಲೆಯ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *