LATEST NEWS
ಬಾಂಗ್ಲಾದೇಶ – ಪ್ರಧಾನಿ ಮುಕ್ಕಾಲು ಗಂಟೆ… ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಒಂದು ಗಂಟೆ ಗಡುವು -ಅರಾಜಕತೆಯಲ್ಲಿ ಬಾಂಗ್ಲಾದೇಶ
ಢಾಕಾ ಅಗಸ್ಟ್ 10: ಬಾಂಗ್ಲಾದೇಶ ತನ್ನ ಪ್ರದಾನಿ ಶೇಖ್ ಹಸೀನಾ ಅವರನ್ನು ದೇಶ ಬೀಡುವಂತೆ ಮಾಡಿದ ಬಳಿಕ ಶಾಂತವಾಗಲಿದೆ ಎಂದು ಕೊಂಡಿದ್ದವರಿಗೆ ಈಗ ಶಾಕ್ ಆಗಿದೆ. ಪ್ರಧಾನಿ ಬಳಿಕ ಇದೀಗ ಪ್ರತಿಭಟನಾಕಾರರು ದೇಶದ ಸುಪ್ರೀಂಕೋರ್ಟ್ ನ ಮುಖ್ಯನಾಯಮೂರ್ತಿಯ ರಾಜೀನಾಮೆಗೆ ಆಗ್ರಹಿಸಿದ್ದು, ಈಗಾಗಲೇ ತೀವ್ರ ಪ್ರತಿಭಟನೆ ನಡೆಸಿದ ಬಳಿಕ ಸಿಜೆಬಿ ಒಬೈದುಲ್ ಹಸನ್ ಅವರು ರಾಜೀನಾಮೆ ನೀಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸುಪ್ರೀಂ ಕೋರ್ಟ್‍ನ ಎರಡೂ ವಿಭಾಗಗಳ ಎಲ್ಲಾ ನ್ಯಾಯಮೂರ್ತಿಗಳೊಂದಿಗೆ ಪೂರ್ಣ ನ್ಯಾಯಾಲಯದ ಸಭೆಗೆ ಹಸನ್ ಕರೆ ನೀಡಿದ ನಂತರ ಪ್ರತಿಭಟನೆಗಳು ಪ್ರಾರಂಭವಾದವು. ಪ್ರತಿಭಟನಾನಿರತ ವಿದ್ಯಾರ್ಥಿಗಳು ಫುಲ್ ಕೋರ್ಟ್ ಸಭೆ ಕರೆಯುವುದನ್ನು ನ್ಯಾಯಾಂಗ ಧಂಗೆ ಎಂದು ಪರಿಗಣಿಸಿ ಹೈಕೋರ್ಟ್ ಆವರಣಕ್ಕೆ ಮುತ್ತಿಗೆ ಹಾಕುವುದಾಗಿ ಘೋಷಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಹಸನ್ ಸಭೆಯನ್ನು ಮುಂದೂಡಿ, ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರನ್ನು ಸಂಪರ್ಕಿಸಿದ ಬಳಿಕ ನ್ಯಾಯಾಧೀಶರು ತಮ್ಮ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ಶೇಖ್ ಹಸೀನಾ ಅವರನ್ನು ದಂಗೆ ಎಬ್ಬಿಸಿ ದೇಶದಿಂದ ಪಲಾಯನ ಮಾಡುವಂತೆ ಮಾಡಿದ ಪ್ರತಿಭಟನಾಕಾರರು ಬಳಿಕ ದೇಶದಲ್ಲಿ ರಕ್ತಪಾತ ಹರಿಸುತ್ತಿದ್ದಾರೆ. ಈಗಾಗಲೇ 300ಕ್ಕೂ ಅಧಿಕ ಮಂದಿಯನ್ನು ಕೊಲೆಗೈಯಲಾಗಿದ್ದು, ಹಿಂದೂ ಗಳ ಮೇಲೆ ದಾಳಿಯನ್ನು ಮುಂದುವರೆಸಿದ್ದಾರೆ.