Connect with us

    LATEST NEWS

    ಬ್ಯಾಂಕಾಕ್ ಶೈಲಿ ಶಿಕ್ಷಣ ವ್ಯವಸ್ಥೆ ಭಾರತದ ಶಾಲೆಗಳಲ್ಲಿ ಸಾಧ್ಯವೇ….?

    ಬ್ಯಾಂಕಾಕ್‌ : ಕೋವಿಡ್ ವೈರಸ್‌ನಿಂದಾಗಿ ಶೈಕ್ಷಣಿಕ ವಲಯದ ಮೇಲೆ ಗಂಭೀರ ಪರಿಣಾಮವಾಗಿದ್ದು, ಕೊರೋನಾ ವೈರಸ್ ಕಾಟದಿಂದಾಗಿ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಮಾರ್ಚ್ ನಿಂದಲೇ ಲಾಕ್ಡೌನ್ ಮಾಡಲಾಗಿತ್ತು. ಕೊರೊನಾ ಭೀತಿಯಿಂದ ಶಾಲೆ, ಕಾಲೇಜು ಎಲ್ಲವೂ ಬಂದ್ ಆಯಿತು.


    ಆದರೆ ಇದೀಗ ಕೊರೊನಾ ಸೊಂಕಿನ ಭೀತಿ ಇದ್ದರೂ ಕೂಡ ಇದೀಗ ಮತ್ತೆ ಅನ್ಲಾಕ್ ಆಗುತ್ತಿದ್ದು, ಶಾಲೆ ಪ್ರಾರಂಭಕ್ಕೆ ಸಾರ್ವಜನಿಕ ವಲಯದಿಂದ ಒತ್ತಡ ಬರುತ್ತಿದೆ. ಆದರೆ ಸರಕಾರಕ್ಕೆ ಶಾಲೆಗಳಲ್ಲಿ ಸಾಮಾಜಿಕ ಅಂತರ ಹಾಗೂ ಕೊರೊನಾ ಬರದಂತೆ ತಡೆಯುದೆ ಸವಾಲಾಗಿ ಪರಿಣಮಿಸಿದೆ.


    ಈ ನಡುವೆ ಅಮೇರಿಕಾದಲ್ಲಿ ಶಾಲೆಗಳಲ್ಲಿ ಪ್ರಾರಂಭವಾದ 2 ವಾರದಲ್ಲಿ 1 ಲಕ್ಷ ವಿಧ್ಯಾರ್ಥಿಗಳಿಗೆ ಸೊಂಕು ತಗುಲಿತ್ತು. ಈ ಕಾರಣಗಳಿಂದಾಗಿ ಈಗ ಶಾಲಾ ಪ್ರಾರಂಭಕ್ಕೆ ವಿಶ್ವದ ಎಲ್ಲಾ ದೇಶಗಳು ಸರಕಾರ ಶಾಲಾ ಪ್ರಾರಂಭಕ್ಕೆ ಹಿಂದೇಟು ಹಾಕುವಂತಾಯಿತು.
    ಕಳೆದ ಮೂರೂವರೆ ತಿಂಗಳುಗಳಿಂದ ಶಾಲೆಯತ್ತ ಬಂದಿರದ ಥಾಯ್ಲೆಂಡ್‌ನ‌ ಶಾಲಾ ಮಕ್ಕಳು ಇದೀಗ ನಿಧಾನವಾಗಿ ಮರಳಿ ಶಾಲೆಗೆ ಬರುತ್ತಿದ್ದು, ಮಕ್ಕಳಿಗೆ ಸೋಂಕು ಹರಡದಂತೆ ತಡೆಯಲು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಥಾಯ್ಲೆಂಡ್‌ ಶಾಲೆಗಳು ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಂಡಿವೆ.


    ಆದರೆ ಬ್ಯಾಂಕಾಕ್ ನ ಶಾಲೆಯೊಂದು ವಿದ್ಯಾರ್ಥಿಗಳನ್ನು ಕೊರೊನಾದಿಂದ ರಕ್ಷಿಸಲು ಈ ಹೊಸ ಉಪಾಯ ಕಂಡುಕೊಂಡಿದೆ. ವಾಟ್ ಖ್ಲೋಂಗ್ನಲ್ಲಿ ಶಾಲೆ ಆರಂಭವಾಗಿದ್ದರೂ, ಇದುವೆರಗೂ ಒಂದೇ ಒಂದು ಕೊರೋನಾ ಕೇಸ್ ಪತ್ತೆಯಾಗಿಲ್ಲ. ಕಾರಣ ಇಲ್ಲಿನ ಕಠಿಣ ನಿಯಮಗಳು ಮತ್ತು ವ್ಯವಸ್ಥೆಗಳು. ಈ ರೀತಿಯ ವ್ಯವಸ್ಥೆ ಭಾರತದ ಶಾಲೆಗಳಲ್ಲಿ ಸಾಧ್ಯವೇ ಎಂಬ ಪ್ರಶ್ನೆ ಹುಟ್ಟಾಕಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *