LATEST NEWS
ಬೆಂಗಳೂರಿನ ರಸ್ತೆಗಿಳಿಯಲಿವೆ 150 ಎಲೆಕ್ಟ್ರಿಕ್ ಬಸ್
ಬೆಂಗಳೂರಿನ ರಸ್ತೆಗಿಳಿಯಲಿವೆ 150 ಎಲೆಕ್ಟ್ರಿಕ್ ಬಸ್
ಬೆಂಗಳೂರು, ಅಕ್ಟೋಬರ್ 12 : ಈ ವರ್ಷದ ಕೊನೆಯೊಳಗೆ ಬೆಂಗಳೂರು ಮಹಾ ನಗರಕ್ಕೆ ಪರಿಸರ ಸ್ನೇಹಿ 150 ಎಲೆಕ್ಟ್ರಿಕ್ ಬಸ್ ಗಳು ಲಗ್ಗೆ ಇಡಲಿವೆ. ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವ ಬೆಂಗಳೂರು ಮಹಾ ನಗರದಲ್ಲಿ ಹೊಹೆ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಈ ಹೊಸ ಸಂಪೂರ್ಣ ಇಲೆಕ್ಟ್ರಿಕ್ ಬಸ್ ಗಳು ರಸ್ತೆಗಿಳಿಯಲಿವೆ.
ಈಗಾಗಲೇ ಪ್ರಾಯೋಗಿಕವಾಗಿ ಸಂಚಾರ ನಡೆಸಿದ್ದು, ಬಿ ಎಂಟಿಸಿ ಅಧಿಕಾರಿಗಳು, ಮತ್ತು ತಾಂತ್ರಿಕ ವರ್ಗ ಈ ಬಸ್ ಗಳ ಹಲವು ಸುತ್ತಿನ ಪ್ರಯೋಗಳನ್ನು ಮಾಡಿ ಸಾಧಕ ಭಾಧಕಗಳನ್ನು ಪರಿಶೀಲನೆ ನಡೆಸಿದೆ. 2014 ಫೆಬ್ರವರಿಯಲ್ಲಿ ಮೊತ್ತ ಮೊದಲು ಪ್ರಾಯೋಗಿಕವಾಗಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ನಡೆಸಿದ್ದ ಬಿಎಂಟಿಸಿ,ನಂತರ ದುಬಾರಿ ವೆಚ್ಚದ ಕಾರಣದಿಂದ ಬಸ್ ಖರೀದಿಯ ಪ್ರಸ್ತಾವನೆಯನ್ನು ಕೈಬಿಟ್ಟಿತ್ತು.
ಆದರೆ ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಯಲ್ಲಿ ಮೂರು ವರ್ಷಗಳ ಬಳಿಕ ತನ್ನ ನಿಲುವನ್ನು ಬದಲಾಯಿಸಿದ್ದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 150 ಎಲೆಕ್ಟ್ರಿಕ್ ಬಸ್‌ಗಳನ್ನು ನಗರದ ರಸ್ತೆಗಿಳಿಸಲು ಯೋಜನೆ ರೂಪಿಸಿದೆ.ಎಲೆಕ್ಟ್ರಿಕ್ ಬಸ್ ಖರೀದಿಗೆ ಕೇಂದ್ರ ಸರಕಾರ ಆರ್ಥಿಕ ನೆರವು ನೀಡಲಿದೆ. ಈ ಮೂಲಕ ಎಲೆಕ್ಟ್ರಿಕ್ ಬಸ್‌ಗಳನ್ನು ಬಳಸಲಿರುವ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ.