DAKSHINA KANNADA
ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿರುವುದು ಇಸ್ಲಾಂ ದಂಗೆ- ಜಗದೀಶ್ ಕಾರಂತ್

ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿರುವುದು ಇಸ್ಲಾಂ ದಂಗೆ- ಜಗದೀಶ್ ಕಾರಂತ್
ಬೆಂಗಳೂರಿನ ಡಿಜೆ ಹಳ್ಳಿ, ಕೆ.ಜೆ ಹಳ್ಳಿಯಲ್ಲಿ ನಡೆದಿರುವುದು ಮೇಲ್ನೋಟಕ್ಕೆ ಕೋಮುಗಲಭೆಯಾಗಿ ಕಂಡರೂ, ಅದೊಂದು ಇಸ್ಲಾಂ ಧಂಗೆ ಎಂದು ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಗದೀಶ್ ಕಾರಂತ್ ಹೇಳಿದರು.
ಪುತ್ತೂರಿನಲ್ಲಿ ದುಷ್ಕರ್ಮಿಗಳಿಂದ ಬಲಿಯಾದ ಕಾರ್ತಿಕ್ ರಾಜ್ ಎನ್ನುವ ಹಿಂದೂ ಸಂಘಟನೆಯ ಕಾರ್ಯಕರ್ತನ ವರ್ಷಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಒರ್ವ ಜನಪ್ರತಿನಿಧಿಯ ಮನೆಯನ್ನು ಸುಡುವುದು, ಪೋಲೀಸ್ ಠಾಣೆಗೆ ಬೆಂಕಿ ಹಚ್ಚುವುದು ಇದು ಕೇವಲ ಕೋಮುಗಲಭೆಯಲ್ಲಿ.
ಇದೊಂದು ಇಸ್ಲಾಂ ದಂಗೆ, ಬುಡಮೇಲು ಕೃತ್ಯ ಎಂದ ಅವರು ಇಂಥ ಕೃತ್ಯಗಳು ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ನಡೆಯಲಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು ಆತ್ಮರಕ್ಷಣೆಗಾಗಿ ಸಜ್ಜಾಗಬೇಕಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಡಿ.ಜೆ ಹಳ್ಳಿಯಲ್ಲಿ ಶಾಸಕನ ಮನೆಗೆ ನುಗ್ಗಿದ ದಾಳಿಕೋರರು ಮನೆಯನ್ನು ಸಂಪೂರ್ಣ ಸುಟ್ಟು ಹಾಕಿದ್ದರು.
ಆದರೆ ಆ ಸಂದರ್ಭದಲ್ಲಿ ಶಾಸಕರ ಮನೆಯ ಹೆಣ್ಣು ಮಕ್ಕಳು ಯಾರೂ ಇಲ್ಲದ ಕಾರಣ ಆಗಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.
ಸಿಎಎ ಹಾಗೂ ಕೊರೊನಾ ಸಂದರ್ಭದಲ್ಲಿ ಇಂಥಹ ದುಷ್ಕತ್ಯಗಳು ನಡೆದಿದ್ದು, ಮಂಗಳೂರಿನಲ್ಲಿ ನಡೆದ ಸಿಎಎ ಪ್ರತಿಭಟನೆಯ ಹಿಂಸಾಚಾರದಲ್ಲಿ ಪೋಲೀಸರು ಗುಂಡು ಹಾರಿಸಿದ ಬಳಿಕ ಇಡೀ ರಾಜ್ಯದಲ್ಲೇ ಸಿಎಎ ಪ್ರತಿಭಟನೆಗಳು ತನ್ನಿಂದ ತಾನೇ ನಿಂತು ಹೋಗಿದೆ ಎಂದರು.
ಕೆ.ಜೆ. ಹಳ್ಳಿ, ಡಿ.ಜೆ.ಹಳ್ಳಿ, ಪಾದರಾಯನಪುರು, ಬೊಮ್ಮಸಂದ್ರ, ಮಂಗಳೂರಿನಲ್ಲಿ ನಡೆದಂತಹ ಘಟನೆಗಳು ಕೊನೆಯಾಗಬೇಕು ಎನ್ನುವ ಎಚ್ಚರಿಕೆಯನ್ನೂ ಅವರು ನೀಡಿದರು.
ತಮ್ಮ ಮನೆ-ಮಂದಿಯ ರಕ್ಷಣೆಗಾಗಿ ಹಿಂದೂ ಸಂಘಟನೆಗಳು ಸಾಮಾಜಿಕ ಸುರಕ್ಷತೆಯ ಜಾಲವನ್ನು ಬಲಪಡಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.