DAKSHINA KANNADA
ಬಜರಂಗದಳವನ್ನ ಬ್ಯಾನ್ ಮಾಡೋ ತಾಕತ್ ಕಾಂಗ್ರೆಸ್ ಗೆ ಇದ್ಯಾ..?: ಕಲ್ಲಡ್ಕ ಪ್ರಭಾಕರ್ ಭಟ್

ಪುತ್ತೂರು, ಮೇ 04: ಪುತ್ತಿಲದಲ್ಲಿ ನಡೆದ ಮಾತೃ ಪೂಜನಾ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಾಂಗ್ರೆಸ್ ನ ಪ್ರಣಾಳಿಕೆ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದಾರೆ ಅಧಿಕಾರಕ್ಕೆ ಬಂದರೆ ಒಂದು ದಿನದಲ್ಲಿ ಗೋಹತ್ಯೆ ನಿಷೇಧ ಕಾನೂನು ವಾಪಸ್ ಪಡೀತಿವಿ ಅಂತಾರೆ, ಇದೆಂತ ದ್ರೋಹ, ತಾಯಿಗೆ ದ್ರೋಹ ಮಾಡಿದ ಹಾಗೆ.

ಮತ್ತೆ ಮತಾಂತರ ನಿಷೇಧ ಕಾನೂನು ವಾಪಸ್ ತೆಗೋತಿವಿ ಅಂತರೆ, ಹೀಗಾದ್ರೆ ನಾಳೆ ನಮ್ಮ ಮಕ್ಕಳು ಹಿಂದೂಗಳಾಗಿ ಉಳಿತಾರ ಅಂತ ಯೋಚನೆ ಮಾಡಿದ್ದಾರಾ ಕಾಂಗ್ರೆಸ್ ನವ್ರು..? ಇನ್ನು ಮುಸಲ್ಮಾನರ ಮೀಸಲಾತಿಯನ್ನ ಮತ್ತೆ ಮುಸಲ್ಮಾನರಿಗೆ ಸಿಗುವಂತೆ ಮಾಡ್ತೇವೆ ಅಂತಾರೆ, ಹಾಗಾದ್ರೆ ಕಾಂಗ್ರೆಸ್ ನವ್ರು ಮುಸಲ್ಮಾನರನ್ನ ಬೆಳೆಸೋದು ಮಾತ್ರನಾ..?
ಬಜರಂಗದಳವನ್ನ ಬ್ಯಾನ್ ಮಾಡೋ ತಾಕತ್ ಕಾಂಗ್ರೆಸ್ ಗೆ ಇದ್ಯಾ..? ಇದು ನಿಮ್ಮಿಂದ ಸಾಧ್ಯನಾ ಕಾಂಗ್ರೆಸ್ಸಿಗರೇ? ಇದನ್ನೆಲ್ಲ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದನ್ನೆಲ್ಲ ಬ್ಯಾನ್ ಮಾಡ್ತಿವಿ ಅಂತಾರೆ, ಹಾಗಾದ್ರೆ ಕಾಂಗ್ರೆಸ್ ಇರೋದು ಹಿಂದೂಗಳಿಗೆ ಅನ್ಯಾಯ ಮಾಡೋದಕ್ಕೆನಾ?ಆದ್ರೆ ಖಂಡಿತವಾಗಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿಕಾರಿದ್ದಾರೆ.