LATEST NEWS
ಅಕ್ರಮ ಗೋಸಾಗಾಟ – ಕಸಾಯಿ ಖಾನೆಗಳಿಗೆ ಬಜರಂಗದಳ ದಾಳಿ ಎಚ್ಚರಿಕೆ

ಅಕ್ರಮ ಗೋಸಾಗಾಟ – ಕಸಾಯಿ ಖಾನೆಗಳಿಗೆ ಬಜರಂಗದಳ ದಾಳಿ ಎಚ್ಚರಿಕೆ
ಉಡುಪಿ ಅಕ್ಟೋಬರ್ 17: ರಾಜ್ಯದಲ್ಲಿ ಕಾಂಗ್ರೇಸ್ ಸರಕಾರದ ಬಂದ ನಂತರ ನಿರಂತರವಾಗಿ ಅಕ್ರಮ ಗೋಸಾಗಾಟ ಹಾಗೂ ಗೋ ಹತ್ಯೆ ನಡೆಯುತ್ತಿದೆ ಎಂದು ಬಜರಂಗದಳ ಆರೋಪಿಸಿದೆ. ಉಡುಪಿಯಲ್ಲಿ ಮಾತನಾಡಿದ ಬಜರಂಗದಳದ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ಕಾಂಗ್ರೇಸ್ ಸರಕಾರ ಅಕ್ರಮ ಗೋಸಾಗಾಟ ಹಾಗೂ ಗೋ ಹತ್ಯೆಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿದರು.
ಅಕ್ರಮ ಗೋಹತ್ಯೆ, ಗೋಸಾಗಾಟ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ತಾಳ್ಮೆ ಪರಿಕ್ಷೀಸಬೇಡಿ ಎಂದು ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದರು. ಸರಕಾರ ಅಕ್ರಮ ಕಸಾಯಿಖಾನೆಗಳ ವಿರುದ್ದ ಕ್ರಮಕೈಗೊಳ್ಳದಿದ್ದಲ್ಲಿ ಬಜರಂಗದಳ ಅಕ್ರಮ ಗೋಸಾಗಾಟದ ವಾಹನಗಳನ್ನು ತಡೆಯುತ್ತೆವೆ. ಅಲ್ಲದೆ ಅಕ್ರಮ ಕಸಾಯಿ ಖಾನೆಗಳಿಗೆ ದಾಳಿ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
