LATEST NEWS
ಬಜ್ಪೆ – ರಸ್ತೆ ಗುಂಡಿಯಿಂದಾಗಿ ಜೀವ ಕಳೆದುಕೊಂಡ ಯುವಕ

ಬಜಪೆ ಎಪ್ರಿಲ್ 21: ಕಾರೊಂದು ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿ ತಲೆ ಕೆಳಗಾಗಿ ಬಿದ್ದ ಘಟನೆ ಶನಿವಾರ ರಾತ್ರಿ ಕೆಂಜಾರು ವಿಮಾನ ನಿಲ್ದಾಣದ ನಿರ್ಗಮನ ದ್ವಾರದ ಬಳಿಯ ರಾಜ್ಯ ಹೆದ್ದಾರಿ 67ರ ಪೆರ್ಮುದೆ ಸಮೀಪ ನಡೆದಿದೆ.
ಅಪಘಾತದಲ್ಲಿ ಪೆರ್ಮುದೆಯ ನಿವಾಸಿ ಜೊಸ್ವಾ ಪಿಂಟೋ (27) ಮೃತಪಟ್ಟಿದ್ದಾರೆ. ಇವರೊಂದಿಗೆ ಕಾರಿನಲ್ಲಿ ಸಂಚರಿಸುತ್ತಿದ್ದ ಸ್ನೇಹಿತರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಶನಿವಾರದ ಬಜಪೆ ಚರ್ಚ್‌ನಲ್ಲಿ ನಡೆದ ಪೂಜೆಯಲ್ಲಿ ಭಾಗವಹಿಸಿದ್ದರು. ಬಳಿಕ ಮಂಗಳೂರಿಗೆ ತೆರಳಿ ವಾಪಸು ಪೆರ್ಮುದೆಗೆ ಬರುತ್ತಿದ್ದಾಗ ಘಟನೆ ಸಂಭವಿಸಿದೆ.

ಜೋಶ್ವಾ ಪಿಂಟೊ ಏಪ್ರಿಲ್ 20ರಂದು ಈಸ್ಟರ್ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ, ಮಂಗಳೂರಿನಿಂದ ತನ್ನ ಮಿತ್ರರೊಡನೆ ಕಾರಲ್ಲಿ ವಾಪಸ್ ಪೆರ್ಮುದೆ ಬರುತ್ತಿದ್ದರು. ಈ ವೇಳೆ ರಸ್ತೆಯಲ್ಲಿನ ಹೊಂಡಕ್ಕೆ ಕಾರು ಬಡಿದು, ನಿಯಂತ್ರಣ ಕಳೆದುಕೊಂಡು ತಿರುವಿನಲ್ಲಿ ತಲೆಕೆಳಗಾಗಿ ಮಗುಚಿ ಬಿದ್ದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ನಿಸ್ವಾರ್ಥ ಸಮಾಜ ಸೇವೆಯ ಮೂಲಕ ಮನೆ ಮಾತಾಗಿದ್ದ ಜೋಶ್ವಾ ಪಿಂಟೊ ಬಜ್ಪೆ ಚರ್ಚ್ ಸದಸ್ಯರಾಗಿದ್ದರು. ಘಟನೆಯಲ್ಲಿ ಇನ್ನೊಬ್ಬರ ಕೈ, ಕಾಲಿಗೆ ಸ್ಪಲ್ಪ ಗಾಯವಾಗಿದೆ. ಈ ಘಟನೆ ರಾತ್ರಿ ನಡೆದ ಕಾರಣ ಹಾಗೂ ಕಾರು ಹೆದ್ದಾರಿಯ ಕೆಳಗಡೆ ಗುಂಡಿಗೆ ಬಿದ್ದಿದ್ದ ಕಾರಣ ಯಾರಿಗೂ ತಿಳಿದಿಲ್ಲ. ಕಾರು ಹೆದ್ದಾರಿಯ ಬದಿಯ ಅವರಣ ಗೋಡೆಯನ್ನು ದಾಟಿ ಕೆಳಗೆ ಬಿದ್ದಿದೆ. ಮಂಗಳೂರು ಉತ್ತರ ಸಂಚಾರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.