LATEST NEWS
ಬಹುಮನಿ ಸುಲ್ತಾನ್ ಜಯಂತಿ ಬಗ್ಗೆ ನನಗೆ ಮಾಹಿತಿ ಇಲ್ಲ – ಕಾಗೋಡು ತಿಮ್ಮಪ್ಪ
ಬಹುಮನಿ ಸುಲ್ತಾನ್ ಜಯಂತಿ ಬಗ್ಗೆ ನನಗೆ ಮಾಹಿತಿ ಇಲ್ಲ – ಕಾಗೋಡು ತಿಮ್ಮಪ್ಪ
ಉಡುಪಿ ಫೆಬ್ರವರಿ 14: ರಾಜ್ಯಸರಕಾರ ನಡೆಸಲು ಉದ್ದೇಶಿಸಿರುವ ಬಹುಮನಿ ಸುಲ್ತಾನ್ ಜಯಂತಿ ಆಚರಣೆ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮುಪ್ಪ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಮುಂದಿನ ತಿಂಗಳು 6 ರಂದು ಬಹಮನಿ ಸುಲ್ತಾನರ ಜಯಂತಿ ಆಚರಿಸಲು ತೀರ್ಮಾನಿಸಿದ್ದು, ಈ ಬಗ್ಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಬಹುಮನಿ ಸುಲ್ತಾನ್ ಆಚರಣೆ ಬಗ್ಗೆ ನನಗೆ ಗೊತ್ತಿಲ್ಲ, ಆ ಕಾಲದಲ್ಲಿ ನಾನೂ ನೀವು ಯಾರು ಹುಟ್ಟಿರಲಿಲ್ಲ ಎಂದು ಹೇಳಿದರು. ಯಾವನು ಏನು ಚರಿತ್ರೆ ಬರೆದನೋ ಗೊತ್ತಿಲ್ಲ, ಆಯಾಯ ಕಾಲದಲ್ಲಿ ಏನೇನು ಆಗಿದೆ ಅದು ಸರಿ ,ರಾಜಮಹಾರಾಜರು ಸಾಮ್ರಾಜ್ಯ ವಿಸ್ತರಣೆ ಮಾಡ್ತಾ ಬಂದರು, ಆಳ್ವಿಕೆ ಮಾಡಿದ ರಾಜರಿಗೆ ಜನರ ಬಗ್ಗೆ ಕಾಳಜಿ ಇರುತ್ತಿರಲಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರವಾಸ ಮಾಡಿರುವುದರಿಂದ ಕಾಂಗ್ರೆಸ್ ಗೆ ಹೊಸ ಚೈತನ್ಯ ಬಂದಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ಮಾಧ್ಯಮಗಳೂ ಕೂಡ ರಾಹುಲ್ ಗಾಂಧಿ ಪ್ರವಾಸಕ್ಕೆ ದೊಡ್ಡ ರೀತಿಯಲ್ಲಿ ಪ್ರಚಾರ ನೀಡಿದವು ಎಂದು ಹೇಳಿದ ಅವರು ಬಿಜೆಪಿ ದೊಡ್ಡ ರಾಜಕೀಯ ಪಕ್ಷ, ನಮ್ಮದು ಒಂದು ಹಳೇ ರಾಜಕೀಯ ಪಕ್ಷ ಹಾಗಾಗಿ ಮೋದಿ- ಅಮಿತ್ ಶಾ ಯಾರೇ ರಾಜ್ಯಕ್ಕೆ ಬಂದ್ರೂ ನಮಗೇನೂ ನಷ್ಟ ಇಲ್ಲ ಎಂದು ಹೇಳಿದರು.
ಸಾಗರ ಕ್ಷೇತ್ರದಿಂದ ಜಯಮಾಲಾ ಸ್ಪರ್ಧೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಕಾಗೋಡು ತಿಮ್ಮಪ್ಪ ಯಾರು ಬೇಕಾದ್ರು ಸ್ಪರ್ಧೆ ಮಾಡಬಹುದು, ಪಕ್ಷ ಹೇಗೆ ತೀರ್ಮಾನ ಮಾಡುತ್ತದೋ ಅದಕ್ಕೆ ನಾನು ಬದ್ಧ ಎಂದು ತಿಳಿಸಿದರು.