LATEST NEWS
ಕಣ್ಸನ್ನೆಯ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ದ ಪೊಲೀಸರಿಗೆ ದೂರು
ಕಣ್ಸನ್ನೆಯ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ದ ಪೊಲೀಸರಿಗೆ ದೂರು
ಮಂಗಳೂರು ಫೆಬ್ರವರಿ 14: ಸದ್ಯದ ಇಂಟರ್ ನೆಟ್ ಹಾಟ್ ಟ್ರೇಂಡ್ ಮಲಯಾಳಂ ನಟಿ ಕಣ್ಸನ್ನೆಯ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ದ ದೂರು ದಾಖಲಾಗಿದೆ.
ಪ್ರಿಯಾ ಪ್ರಕಾಶ್ ನಟಿಸಿರುವ ಒರು ಅದಾರ್ ಲವ್ ಸಿನಿಮಾದ ಮಾಣಿಕ್ಯ ಮಲರಯಾ ಪೂವಿ ಹಾಡು ಭಾರೀ ಸದ್ದು ಮಾಡುತ್ತಿದ್ದಂತೆ ಈ ಬಗ್ಗೆ ಅಪಸ್ವರ ಕೂಡ ಎದ್ದಿದೆ. ಹಾಡಿನಲ್ಲಿ ಮುಸಲ್ಮಾನರ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿದೆ.
ಹೈದರಬಾದ್ ನ ಫಾರೂಕ್ ನಗರ ಪ್ರದೇಶದ ಯುವಕರ ಗುಂಪೊಂದು ಹೈದರಾಬಾದಿನ ಫಲಕ್ನುಮಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರವಾದಿ ಕೀರ್ತನೆಗಳನ್ನು ಸಿನಿಮಾ ಹಾಡಿಗೆ ಬಳಸಿರುವುದು ಸರಿಯಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ. ಪೊಲೀಸರು ಬರಹದ ಮೂಲಕ ದೂರನ್ನು ಸ್ವೀಕರಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಮಾಣಿಕ್ಯ ಮಲರಯಾ ಪೂವಿ ಹಾಡನ್ನು ವಿನೀತ್ ಶ್ರೀನಿವಾಸನ್ ಹಾಡಿದ್ದು ಶಾನ್ ರೆಹಮಾನ್ ಸಂಯೋಜಿಸಿದ್ದಾರೆ. ಆದರೆ ರಾತ್ರಿ ಕಳೆಯುವುದರೊಳಗೆ ಜನಪ್ರಿಯರಾಗಿದ್ದು ಪ್ರಿಯಾ ಪ್ರಕಾಶ್ ವಾರಿಯರ್.
ಹಾಡಿನ ವಿಡಿಯೊದಲ್ಲಿ ಪ್ರಿಯಾ ಕಣ್ಣನ್ನು ಮಿಟುಕಿಸಿ ತನ್ನ ಪ್ರೀತಿಪಾತ್ರದ ಹುಡುಗನ ಗಮನವನ್ನು ಸೆಳೆಯುವ ದೃಶ್ಯ ಇಂಟರ್ ನೆಟ್ ನಲ್ಲಿ ಟ್ರೆಂಡ್ ಸೃಷ್ಠಿಸಿದೆ. ಕೇರಳದ ತ್ರಿಶೂರಿನ 18 ವರ್ಷದ ಹುಡುಗಿ ಪ್ರಿಯಾ ತಮ್ಮ ಸಮ್ಮೋಹಗೊಳಿಸುವ ಅಭಿವ್ಯಕ್ತಿ ಮೂಲಕ ಕ್ರೇಜ್ ಹುಟ್ಟಿಸಿದ್ದಾರೆ. ಪ್ರಸ್ತುತ 17 ಲಕ್ಷ ಇನ್ ಸ್ಟಾಗ್ರಾಮ್ ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ಪ್ರಿಯಾ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಪ್ರಸ್ತುತ ಇವರ ಇನ್ ಸ್ಟಾಗ್ರಾಮ್ ಖಾತೆಗೆ ಬ್ಲೂ ಟಿಕ್ ಮಾರ್ಕ್ ಲಭಿಸಿದೆ.
You must be logged in to post a comment Login