Connect with us

DAKSHINA KANNADA

ತೋಟದಲ್ಲೇ ಉಳಿದ 2 ತಿಂಗಳ ಆನೆ ಮರಿ

ಬೆಳ್ತಂಗಡಿ ಅಕ್ಟೋಬರ್ 30: ಆಹಾರ ಅರಸುತ್ತಾ ಕಾಡಿಗೆ ನುಗ್ಗಿದ ಕಾಡಾನೆಗಳ ಹಿಂಡಿನಿಂದ ಆನೆಮರಿಯೊಂದು ದಾರಿ ತಪ್ಪಿದ ಘಟನೆ ಬೆಳ್ತಂಗಡಿಯ ಕಡಿರುದ್ಯಾವರದಲ್ಲಿ ನಡೆದಿದೆ.

ಕಡಿರುದ್ಯಾವರ ಗ್ರಾಮದ ಡೀಕಯ್ಯ ಗೌಡರವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಕೃಷಿಯನ್ನು ಸಂಪೂರ್ಣ ನಾಶ ಮಾಡಿದ್ದು, ತೋಟದಿಂದ ಕಾಡಿಗೆ ಹೋಗುವ ಸಮಯದಲ್ಲಿ ಮರಿಯಾನೆಗೆ ಹೋಗಲು ಸಾಧ್ಯವಾಗದೆ ತೋಟದಲ್ಲೇ ಉಳಿದಿದೆ. ಬೆಳಗ್ಗೆ ತೋಟದ ಮಾಲಕರು ಹೋದಾಗ ವಿಷಯ ತಿಳಿದು ಬಂದಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. 2 ತಿಂಗಳ ಆನೆ ಮರಿಯಾಗಿದ್ದು, ಆನೆಗಳ ಹಿಂಡು ಬಂದು ಮತ್ತೆ ಕರೆದೊಯ್ಯುವ ಸಾಧ್ಯತೆ ಇರುವುದರಿಂದ ಸ್ಥಳಕ್ಕೆ ಯಾರನ್ನೂ ತೆರಳದಂತೆ ಅರಣ್ಯ ಇಲಾಖೆ ಸೂಚಿಸಿದೆ.

Facebook Comments

comments