Connect with us

    LATEST NEWS

    ನಾಲ್ಕು ವರ್ಷದ ಮಗುವಿನ ಜೀವ ತೆಗೆದ ಸಿಮೆಂಟ್ ಪೈಪ್

    ಮುಲ್ಕಿ : ಆಟ ಆಡುತ್ತಿದ್ದ ನಾಲ್ಕು ವರ್ಷದ ಮಗುವಿನ ಮೇಲೆ ಸಿಮೆಂಟಿನ ಪೈಪ್ ಒಂದು ಬಿದ್ದ ಕಾರಣ ಮಗು ಸಾವನಪ್ಪಿರುವ ಘಟನೆ ಮುಲ್ಕಿ ಸಮೀಪದ ಲಿಂಗಪ್ಪಯ್ಯಕಾಡು ಆಶ್ರಯ ಕಾಲೋನಿಯಲ್ಲಿ ನಡೆದಿದೆ.


    ಮೃತ ಬಾಲಕನನ್ನು ನಾಲ್ಕು ವರ್ಷ ಪ್ರಾಯದ ಯುವರಾಜ್ ಎಂದು ಗುರುತಿಸಲಾಗಿದ್ದು, ಮುಲ್ಕಿಯ ಲಿಂಗಪ್ಪಯ್ಯಕಾಡು ಆಶ್ರಯ ಕಾಲೋನಿಯಲ್ಲಿ ಕಳೆದ ಕೆಲ ವರ್ಷಗಳಿಂದ ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ರಾಮು ಮತ್ತು ಶಾಂತ ಎಂಬವರ ನಾಲ್ವರು ಪುತ್ರರಲ್ಲಿ ಕೊನೆಯವನಾದ ಯುವರಾಜ ರ ಸಂಜೆಗೆ ಮನೆಯ ಸಮೀಪದಲ್ಲಿರುವ ಗುತ್ತಿಗೆದಾರ ನಾಗರಾಜ ಎಂಬವರ ಯಾರ್ಡಿನಲ್ಲಿ ರಾಶಿ ಹಾಕಿರುವ ಸಿಮೆಂಟಿನ ಪೈಪುಗಳ ಯಾರ್ಡಿನಲ್ಲಿ ಆಟವಾಡಲು ತೆರಳಿದ್ದ ಎನ್ನಲಾಗಿದೆ. ಮಗು ಆಟವಾಡುತ್ತಿದ್ದ ಸಮಯದಲ್ಲಿ ಏಕಾಏಕಿ ಸಿಮೆಂಟಿನ ಪೈಪ್ ಉರುಳಿ ಮಗುವಿನ ಮೇಲೆ ಬಿದ್ದಿದೆ ಎನ್ನಲಾಗಿದೆ.

    ಈ ಸಂದರ್ಭ ಸ್ಥಳದಲ್ಲಿ ಆಟವಾಡುತ್ತಿದ್ದ ಉಳಿದ ಮಕ್ಕಳು ಬೊಬ್ಬೆ ಹಾಕಿದ್ದಾರೆ. ಮಕ್ಕಳ ಬೊಬ್ಬೆ ಕೇಳಿ ಮನೆಯವರು ಓಡಿ ಬಂದು ತೀವ್ರ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಸಾಗಿಸಿದ್ದು ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮುಲ್ಕಿ ಪೊಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ

    Share Information
    Advertisement
    Click to comment

    Leave a Reply

    Your email address will not be published. Required fields are marked *