Connect with us

LATEST NEWS

ಚಾರ್ಮಾಡಿ – ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ತೆರವು

ಬೆಳ್ತಂಗಡಿ ಸೆಪ್ಟೆಂಬರ್ 02 :ಕರಾವಳಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ರಾಷ್ಟ್ರೀಯ ಹೆದ್ದಾರಿ 73 ರ ಚಾರ್ಮಾಡಿ ಘಾಟ್ ಆರಂಭದಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾದ ಘಟನೆ ನಡೆದಿದ್ದು. ರಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಕಾರದಿಂದ ಮರ ತೆರವುಗೊಳಿಸುವ ಕಾರ್ಯ ನಡೆಯಿತು.


ಮುಂಜಾನೆ 8.45 ರ ಸುಮಾರಿಗೆ ಮರ ಬಿದ್ದಿದ್ದು, ಇದೀಗ ತೆರವು ಕಾರ್ಯ ಯಶಸ್ವಿಯಾಗಿದೆ. ಸುಮಾರು 100 ಕ್ಕೂ ಅಧಿಕ ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿತ್ತು. ಚಾರ್ಮಾಡಿ ಹಸನಬ್ಬ ಸಹಿತ ಹಲವು ಸಮಾಜ ಸೇವಕರು ತಕ್ಷಣ ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸಿದರು. ಚಾರ್ಮಾಡಿ ಘಾಟ್ ಮುಂಜಾನೆ ಅತೀ ಹೆಚ್ಚಿನ ವಾಹನಗಳು ಸಂಚರಿಸುವುದರಿಂದ ಎರಡು ಕಡೆ ರಸ್ತೆ ತಡೆ ಉಂಟಾಯಿತು.