DAKSHINA KANNADA
ಬಾಬ ಬುಡಾನ್ ಗಿರಿ ಗೋರಿ ಧ್ವಂಸ : SDPI ಪ್ರತಿಭಟನೆ

ಬಾಬ ಬುಡಾನ್ ಗಿರಿ ಗೋರಿ ಧ್ವಂಸ : SDPI ಪ್ರತಿಭಟನೆ
ಮಂಗಳೂರು, ಡಿಸೆಂಬರ್ 05 : ಚಿಕ್ಕಮಗಳೂರಿನ ಬಾಬ ಬುಡಾನ್ ಗಿರಿಯಲ್ಲಿ ಧತ್ತಮಾಲಧಾರಿಗಳು ನಡೆಸಿದ ಧಾಂದಲೆಯನ್ನು ಖಂಡಿಸಿ ಎಸ್ ಡಿ ಪಿ ಐ ನೇತ್ರತ್ವದಲ್ಲಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿವಿಧ ಮುಖಂಡರುಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದರು.

ಬಾಬುಡನ್ ಗಿರಿಯಲ್ಲಿ ಕೇಸರಿ ಭಯೋತ್ಪಾದಕರು ನಡೆಸಿದ ದಾಳಿ ಇದಾಗಿದೆ ಎಂದು ಅರೋಪಿಸಿದ ಮುಖಂಡರುಗಳು ಕ್ರೌರ್ಯದ ಮುಂಚೂಣಿಯಲ್ಲಿದ್ದ ವಿ.ಹೆಚ್.ಪಿ , ಬಜರಂಗದಳದ ನಾಯಕರನ್ನು ಬಂಧಿಸುವಂತೆ ಒತ್ತಾಯಿಸಿದರು.
ಇದಕ್ಕೆ ರಾಜ್ಯ ಸರಕಾರದ ವೈಫಲ್ಯ ಕಾರಣ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಎಸ್ ಡಿಪಿ ಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ ಅಥಾವುಲ್ಲಾ, ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ,ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ SDPI ರಾಜ್ಯಾಧ್ಯಕ್ಷ ಜಲೀಲ್ ಕೃಷ್ಣಾಪುರ, ಪಾಲಿಕೆಯ ಸದಸ್ಯರಾದ ಅಯಾಝ್ ಚೊಕ್ಕಬೆಟ್ಟು ,ಶಧಫೀ ದ.ಕ ಜಿಲ್ಲಾ ಕೋಶಾಧಿಕಾರಿ ಇಕ್ಬಾಲ್ ಗೂಡಿನಬಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.