Connect with us

    LATEST NEWS

    ಆಜಾನ್ ಮೈಕ್ ವಿವಾದ – ಕೋಲ ಯಕ್ಷಗಾನಕ್ಕೂ ಬಂತು ಸಂಕಟ…!!

    ಮಂಗಳೂರು: ಹಿಂದೂಪರ ಸಂಘಟನೆ ಶ್ರೀರಾಮ ಸೇನೆ ಎಬ್ಬಿಸಿದ ಅಜಾನ್ ಮೈಕ್ ವಿವಾದ ಇದೀಗ ಯಕ್ಷಗಾನ ಹಾಗೂ ಕೋಲಕ್ಕೂ ಸಂಕಷ್ಟ ತಂದಿದ್ದು, ಸುಪ್ರೀಂಕೋರ್ಟ್ ಆದೇಶ ಪಾಲಿಸಿದರೆ ರಾತ್ರಿ ನಡೆಯುವ ಈ ಎಲ್ಲಾ ಕಾರ್ಯಕ್ರಮಗಳಿಗೂ ನಿರ್ಭಂದ ಬರಲಿದೆ.


    ಅಜಾನ್ ನ ಮೈಕ್ ವಿವಾದ ಎಬ್ಪಿಸಿದ ಶ್ರೀರಾಮ ಸೇನೆ ವಿರುದ್ದ ಇದೀಗ ಹಿಂದೂಗಳು ಹಿಡಿಶಾಪ ಹಾಕಲಾರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕರಾವಳಿಯ ಜನರು ಪ್ರಮೋದ್‌ ಮುತಾಲಿಕ್‌ ಹಾಗೂ ಅವರ ಬೆಂಬಲಿಗರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
    ಅಜಾನ್ ವಿವಾದದ ಬೆನ್ನಲ್ಲೆ ರಾಜ್ಯ ಸರಕಾರ ಸುಪ್ರಿಂಕೋರ್ಟ್ ಆದೇಶವನ್ನು ಜಾರಿಗೆ ಮುಂದಾಗಿದ್ದು, ಧ್ವನಿವರ್ಧಕ ಬಳಕೆ ಕುರಿತಂತೆ ರಾಜ್ಯ ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ.


    ಈ ಸುತ್ತೋಲೆ ಪ್ರಕಾರ ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸುವಂತಿಲ್ಲ. ಒಳಾಂಗಣದ ಕಾರ್ಯಕ್ರಮಗಳಿಗೂ ಅನುಮತಿ ಪಡೆದುಕೊಂಡೇ ನಿಗದಿತ ಡೆಸಿಬಲ್‌ ಸಾಮರ್ಥ್ಯದ ಧ್ವನಿವರ್ಧಕ ಬಳಸಬೇಕು.

    ಆದರೆ ಕರಾವಳಿಯಲ್ಲಿ ಯಕ್ಷಗಾನ ಸೇರಿದಂತೆ ಬಹುತೇಕ ಕೋಲ ನೇಮಗಳು ರಾತ್ರಿ ಸಂದರ್ಭದಲ್ಲೇ ನಡೆಯಲಿದೆ. ಸರ್ಕಾರ ರಾತ್ರಿ ವೇಳೆ ಧ್ವನಿವರ್ಧಕ ಬಳಕೆಗೆ ನಿರ್ಬಂಧ ವಿಧಿಸಿದ್ದರಿಂದ ಯಕ್ಷಗಾನ, ನಾಟಕ, ನೇಮ, ಕೋಲಗಳು ತೊಂದರೆ ಎದುರಿಸುವಂತಾಗಿದೆ.
    ಕರಾವಳಿ ಜಿಲ್ಲೆಗಳಲ್ಲಿ 6 ತಿಂಗಳು ನಿರಂತರವಾಗಿ ಯಕ್ಷಗಾನ ಪ್ರದರ್ಶನ ನಡೆಯುತ್ತವೆ. ಸಂಜೆ 6ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಪ್ರದರ್ಶನ ಏರ್ಪಡಿಸಲಾಗುತ್ತಿದ್ದು, ಈ ಅವಧಿಯಲ್ಲಿ ಧ್ವನಿವರ್ಧಕಗಳ ಬಳಕೆಗೆ ನಿರ್ಬಂಧ ವಿಧಿಸುವುದರಿಂದ ಯಕ್ಷಗಾನ ನಡೆಸು ವುದು ದುಸ್ತರವಾಗಲಿದೆ ಎನ್ನುವ ಮಾತುಗಳು ಕಲಾವಿದರಿಂದ ಕೇಳಿ ಬರುತ್ತಿವೆ. ಕಲಾವಿದರಿಗೆ ತೊಂದರೆ: ಯಕ್ಷಗಾನ ಮಾತ್ರವಲ್ಲದೇ, ನಾಟಕ ತಂಡಗಳಿಗೂ ಈ ಸುತ್ತೋಲೆಯಿಂದ ತೊಂದರೆ ಉಂಟಾಗಲಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *