LATEST NEWS
ಇಂದು ಸಂಜೆ ಮಂಗಳೂರಿನ ವಿವಿಧ ಕಡೆಗಳಲ್ಲಿ ಅಯ್ಯಪ್ಪ ಜ್ಯೋತಿ
ಇಂದು ಸಂಜೆ ಮಂಗಳೂರಿನ ವಿವಿಧ ಕಡೆಗಳಲ್ಲಿ ಅಯ್ಯಪ್ಪ ಜ್ಯೋತಿ
ಮಂಗಳೂರು ಡಿಸೆಂಬರ್ 26: ಶಬರಿಮಲೆಯ ನಂಬಿಕೆ ಸಂಪ್ರದಾಯಗಳನ್ನು ಕಾಪಾಡಬೇಕು ಎಂದು ಒತ್ತಾಯಿಸಿ ಶಬರಿಮಲೆ ಕರ್ಮ ಸಮಿತಿಯ ನೇತೃತ್ವದಲ್ಲಿ ಇಂದು ಕೇರಳ ರಾಜ್ಯದಾದ್ಯಂತ ಅಯ್ಯಪ್ಪ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಂಗಳೂರಿನಲ್ಲೂ ಕೂಡ ಶ್ರೀ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ವಿವಿಧ ಭಾಗಗಳಲ್ಲಿ ಸಾಯಂಕಾಲ 5-45, 6-15ರ ಮಧ್ಯದಲ್ಲಿ ಏಕಕಾಲದಲ್ಲಿ ಮಂಗಳೂರಿನ ವಿವಿಧ ಭಾಗಗಳಲ್ಲಿ ನಡೆಯಲಿದೆ.
ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಜನವರಿ 1 ನೇ ತಾರೀಖಿಗೆ ‘ವನಿತಾ ಮದಿಲ್’ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ. ಈ ಕಾರ್ಯಕ್ರಮದ ವಿರುದ್ಧ ಶಬರಿಮಲೆ ಕರ್ಮ ಸಮಿತಿ ಅಯ್ಯಪ್ಪ ಜ್ಯೋತಿ ಕಾರ್ಯಕ್ರಮ ಆಯೋಜಿಸಿದೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರದಿಂದ ಶುರುವಾಗಿ ಕೇರಳ ತಮಿಳುನಾಡು ಗಡಿ ಪ್ರದೇಶ ಕಳಿಯಿಕ್ಕಾವಿಳ ವರೆಗೆ ಅಯ್ಯಪ್ಪ ಜ್ಯೋತಿ ಬೆಳಗಿಸಲಾಗುವುದು.
ಮಂಗಳೂರಿನಲ್ಲೂ ನಿಗದಿತ ಸ್ಥಳಗಳಲ್ಲಿ ಒಟ್ಟಾಗಿ ನಿಂತು ದೀಪ ಬೆಳಗಿ ಶರಣುಘೋಷ ಕೂಗಿ ಅಯ್ಯಪ್ಪ ಭಕ್ತರೊಂದಿಗೆ ನಾವಿದ್ದೇವೆ ಎಂದು ತೋರಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ಪಂಪ್ ವೆಲ್ ಸರ್ಕಲ್ ಹತ್ತಿರ ಕದ್ರಿ ಮಲ್ಲಿಕಟ್ಟೆ ಮೈದಾನ,ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಮುಂಬಾಗ, ಮಂಗಳಾದೇವಿ ದೇವಸ್ಥಾನ, ಸುರತ್ಕಲ್ ಜಂಕ್ಷನ್, ವಾಮಂಜೂರು, ಕಾವೂರುಗಳಲ್ಲಿ ಅದೇ ದಿನ ಅಂದರೆ ದಿನಾಂಕ 26-12-18 ಬುದವಾರ ಸಾಯಂಕಾಲ 5-45ರ ನಂತರ 7ರ ಮಧ್ಯೆ ಏಕಕಾಲದಲ್ಲಿ ದೀಪವನ್ನು ಬೆಳಗುವ ಮೂಲಕ ಕೇರಳದ ಭಕ್ತರ ಅಯ್ಯಪ್ಪ ದೀಪ ಜ್ಯೋತಿಯಾತ್ರೆಗೆ ಬೆಂಬಲ ಸೂಚಿಸಲಿದೆ. ದೀಪ ಬೆಳಗಿ ಕನಿಷ್ಠ 15 ನಿಮಿಷ ಅಯ್ಯಪ್ಪ ಶರಣುಘೋಷಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದರ ವಿರೋಧವನ್ನು ಪ್ರಾರ್ಥನೆಯ ಮೂಲಕ ಮಾಡಲಿದ್ದಾರೆ.