ಸಾಮಾಜಿಕ ಜಾಲತಾಣಗಳಲ್ಲಿ ಏಸುಕ್ರಿಸ್ತರ ವಿರುದ್ದ ಅವಹೇಳನಕಾರಿ ಬರವಣಿಗೆ ದೂರು ದಾಖಲು

ಬೆಳ್ತಂಗಡಿ ಡಿಸೆಂಬರ್ 26: ಕ್ರಿಸ್ಮಸ್ ದಿನಾಚರಣೆಯಾದ ನಿನ್ನೆ ರವೀಂದ್ರ ಗೌಡ ಪಾಟೀಲ್ ಎಂಬಾತ ಸಾಮಾಜಿಕ ಜಾಲತಾಣಗಳಾದ ಫೆಸ್ಬುಕ್ ಹಾಗೂ ವಾಟ್ಸ್ ಫ್ ಗಳಲ್ಲಿ ಏಸು ಕ್ರಿಸ್ತರ ಬಗ್ಗೆ ಮತ್ತು ಅವರ ತಾಯಿಯಾದ ಮೇರಿ ಅವರ ಬಗ್ಗೆ ಅವಹೇಳನಕಾರಿಯಾದ ಕೆಟ್ಟ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ ಎಂದು ಆರೋಪಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಅಂತೋನಿ ಪಿ.ಡಿ ಎಂಬವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರವೀಂದ್ರ ಗೌಡ ಪಾಟೀಲ್ ಎಂಬಾತ ಈ ರೀತಿಯ ಕೆಟ್ಟ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.

ಈ ರೀತಿಯ ಬರವಣೆಗೆ ಕ್ರೈಸ್ತ ಧರ್ಮದ ಸಮುದಾಯಕ್ಕೆ ತೀವ್ರ ನೋವುಂಟಾಗಿದ್ದು, ಈ ರೀತಿಯ ಉದ್ರೇಕಕಾರಿ ಪೋಸ್ಟ್ ಗಳನ್ನು ಹರಡಿಸಿ ಜನರಲ್ಲಿ ಕೋಮು ಸೌಹಾರ್ದತೆ ಹದಗೆಡುವಂತೆ ಮಾಡುವ ದುಷ್ಕರ್ಮಿಗಳ ವಿರುದ್ದ ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

4 Shares

Facebook Comments

comments