DAKSHINA KANNADA
ಕಣ್ಣಿನ ಕಾಯಿಲೆಗಳಿಗೆ ಆಯುರ್ವೇದ ಚಿಕಿತ್ಸೆ….! ಈಗ ಈಝಿ ಆಯುರ್ವೇದ ಆಸ್ಪತ್ರೆಯಲ್ಲಿ ಲಭ್ಯ
ಮಂಗಳೂರು : ‘ಮಾನವನ ಕಣ್ಣು’ ಬೆಳಕಿಗೆ ಪ್ರತಿಕ್ರಿಯಿಸುವ ವಿವಿಧೋದ್ದೇಶಗಳುಳ್ಳ ಅತ್ಯಮೂಲ್ಯ ಅಂಗವಾಗಿದೆ. ಮಾನವನ ಕಣ್ಣು ಸುಮಾರು ೧೦ ದಶಲಕ್ಷದಷ್ಟು ವಿವಿಧ ಬಣ್ಣಗಳ ನಡುವೆ ವ್ಯತ್ಯಾಸ ಗುರುತಿಸಬಲ್ಲದು. ಕಣ್ಣು ಪರಿಪೂರ್ಣ ಗೋಲಾಕಾರದಲ್ಲಿರುವುದಿಲ್ಲ, ಬದಲಿಗೆ ಇದು ಜೋಡಿಸಿದ ಎರಡು ಭಾಗಗಳ ಘಟಕವಾಗಿದೆ.
ಮೊದಲೆಲ್ಲಾ ಕನ್ನಡಕ ಹಾಕಿಕೊಳ್ಳುವುದು ಒಂದು ಫ್ಯಾಷನ್ಎನ್ನುವ ಜಗತ್ತಿತ್ತು. ಆದರೆ ಈಗ ಹುಟ್ಟಿದ ಮಗುವಿನಿಂದ ವಯಸ್ಸಾದವರ ತನಕ ಕಣ್ಣಿನ ದೋಷದಿಂದಾಗಿ ಕನ್ನಡಕವನ್ನು ದೇಹದ ಒಂದು ಅಂಗವಾಗಿರುವುದು ಶೋಚನೀಯ. ಇದಕ್ಕೆ ಕಾರಣ ದೃಷ್ಟಿಯಲ್ಲಿ ದೋಷಗಳು. ಈ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಯುರ್ವೇದದಲ್ಲಿ ಉತ್ತಮ ಮದ್ದುಗಳಿವೆ.
ಪ್ರಾಚೀನ ಆಯುರ್ವೇದ ಪಠ್ಯಪುಸ್ತಕಗಳಾದ ಸುಶ್ರುತ ಸಂಹಿತೆ, ಅಷ್ಟಾಂಗ ಹೃದಯಂ ಇತ್ಯಾದಿಗಳಲ್ಲಿ ಆಚಾರ್ಯ ಸುಶ್ರುತ, ಆಚಾರ್ಯ ವಾಗ್ಭಟರು ಕಣ್ಣುಗಳ ಅಂಗರಚನಾಶಾಸ್ತ್ರ, ಕಣ್ಣುಗಳನ್ನು ಹೇಗೆ ಕಾಳಜಿ ವಹಿಸಬೇಕೆಂಬ ಉಲ್ಲೇಖವಿದೆ. ಉದಾಹರಣೆಗೆ ಆಚಾರ್ಯ ಸುಶ್ರುತರು ಸುಮಾರು ಕ್ರಿ.ಪೂ.ಐದನೇ ಶತಮಾನದಲ್ಲಿಸುಶ್ರುತ ಸಂಹಿತೆಯನ್ನು ಬರೆದಿದ್ದರು. ಅವರು ಕಣ್ಣಿಗೆ ಸಂಬಂಧಿಸಿದ ಸುಮಾರು 76 ಕಾಯಿಲೆಗಳನ್ನು, ಹಾಗೆಯೇ ಹಲವಾರು ನೇತ್ರವಿಜ್ಞಾನಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸಕ ಸಲಕರಣೆಗಳು ಮತ್ತು ತಂತ್ರಗಳ ಬಗ್ಗೆ ವರ್ಣನೆಯನ್ನು ಮಾಡಿದ್ದನು. ಸುಶ್ರೂತನುಭಾರತದ ಮೊದಲ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಕ ಎಂದು ವರ್ಣಿಸಲ್ಪಟ್ಟಿದ್ದಾರೆ.
ಮಕ್ಕಳಿಂದ ಹಿಡಿದು ಹಿರಿಯರವರೆಗೆ ಕೋವಿಡ್ ನಂತರ ಎಲ್ಲಾ ವಯಸ್ಸಿನ ಜನರು ಕಣ್ಣಿನ ಕಾಯಿಲೆಗಳಿಂದ ಬಳಲುತ್ತಿದ್ದಾರೆ.ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆಈಝಿ ಆಯುರ್ವೇದ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡುವ ಪ್ರಯತ್ನವನ್ನು ಮಾಡುತ್ತಿದೆ. ವಿವಿಧ ಕಣ್ಣಿನ ಅಸ್ವಸ್ಥತೆಗಳು ಮತ್ತು ಅವುಗಳ ಚಿಕಿತ್ಸೆಗೆ ಕಾರಣಗಳು, ಪ್ರಾಚೀನ ಚಿಕಿತ್ಸಾ ತತ್ವಗಳು, ವಿವಿಧ ಕಣ್ಣಿನ ಕಾಯಿಲೆಗಳಿಗೆ ಬೇಕಾದ ಚಿಕಿತ್ಸೆ, ಚಿಕಿತ್ಸೆಗೆಅಳವಡಿಸುವ ವಿಧಾನಈ ಆಯುರ್ವೇದ ಆಸ್ಪತ್ರೆಯಲ್ಲಿಲಭ್ಯವಿರುತ್ತದೆ.
‘ನೇತ್ರಶಾಸ್ತ್ರಜ್ಞ’ ಎಂಬ ಶಬ್ದವು ಕಣ್ಣಿನ ಸಮಸ್ಯೆಗಳ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಪರಿಣಿತನಾಗಿರುವ ವ್ಯಕ್ತಿಗೆ ಸೂಚಿಸಲ್ಪಡುತ್ತದೆ.ಮಂಗಳೂರಿನ ಅಂತರಾಷ್ಟ್ರೀಯ ಖ್ಯಾತಿಯ ಈಝಿ ಆಯುರ್ವೇದ ಆಸ್ಪತ್ರೆಯಲ್ಲಿ ಇದೀಗ ಕಣ್ಣಿನ ಕಾಯಿಲೆಗಳಿಗೆ ಚಿಕಿತ್ಸೆ ಆರಂಭಿಸಲಾಗಿದೆ. ಕೇರಳದ ಪ್ರಸಿದ್ಧ ಆಯುರ್ವೇದ ನೇತ್ರಶಾಸ್ತ್ರಜ್ಞ (ಕಣ್ಣಿನ ತಜ್ಞ) ಡಾ ಅಶ್ವಿನ್ ಪಿ. ವಿ. ಬಿ.ಎ.ಎಂ.ಎಸ್ ಎಂ.ಡಿ (ಆಯು), ಆಯುರ್ವೇದ ಚಿಕಿತ್ಸೆಯ ಮೂಲಕ ಕಣ್ಣಿನ ಸಮಸ್ಯೆಗಳಾದ ಆರಂಭಿಕ ಹಂತದ ಗ್ಲಾಕೋಮಾ, ಕಣ್ಣಿನ ಪೊರೆ ,ಕಣ್ಣಿನ ದೃಷ್ಟಿ ದೋಷ ,ಕಣ್ಣಿನ ಕುರು, ಮಕ್ಕಳ ದೃಷ್ಟಿ ದೋಷ ಇತ್ಯಾದಿಗಳಿಗೆ ಶಸ್ತ್ರ ಚಿಕಿತ್ಸೆ ಮತ್ತು ಔಷಧಿಗಳನ್ನು ಒದಗಿಸಲು ಲಭ್ಯವಿರುತ್ತಾರೆ.
ಮಂಗಳೂರಿನ ಈಝಿ ಆಯುರ್ವೇದ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಮೊದಲ ಮತ್ತು ಕೊನೆಯ ಶನಿವಾರದಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಕಣ್ಣಿನ ತಜ್ಞ ಡಾ ಅಶ್ವಿನ್ ಪಿ.ವಿ.ಸಮಾಲೋಚನೆಗೆ ಲಭ್ಯವಿರುತ್ತಾರೆ. ಅವರ ಸಮಾಲೋಚನೆ ಫೆಬ್ರವರಿ 24, 2024 ರಂದು ಪ್ರಾರಂಭವಾಗುತ್ತದೆ.
ಸಂಪರ್ಕಿಸಬೇಕಾದ ವಿಳಾಸ:
ಈಝಿ ಆಯುರ್ವೇದ ಆಸ್ಪತ್ರೆ,
ಎಂಫಸಿಸ್, ಮಾರ್ಗನ್ಸ್ ಗೇಟ್ ಹತ್ತಿರ, ಮಂಗಳೂರು
ನೇರ ಸಂದರ್ಶನಕ್ಕಾಗಿ ಕಾಯ್ದಿರಿಸಲು ಕರೆ ಮಾಡಿ:
+91 86188 98900 , +91 88673 85567