Connect with us

LATEST NEWS

ಚಲಿಸುತ್ತಿದ್ದ ಆಟೋದಲ್ಲಿ ಚಾಲಕನಿಗೆ ಹೃದಯಾಘಾತ….!!

ಮಂಗಳೂರು ಡಿಸೆಂಬರ್ 3: ಆಟೋ ಚಲಿಸುತ್ತಿರುವ ವೇಳೆಯೇ ಹೃದಯಾಘಾತಕ್ಕೆ ಒಳಗಾಗಿ ಆಟೋ ಚಾಲಕ ಸಾವನಪ್ಪಿರುವ ಘಟನೆ ಇಂದು ಬೆಳಗ್ಗೆ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ಮೃತರನ್ನ ಚೊಕ್ಕಬೆಟ್ಟು ನಿವಾಸಿ ಮುಹಮ್ಮದ್ ಹನೀಫ್ (46) ಎಂದು ಗುರುತಿಸಲಾಗಿದೆ. ಸವಾರಿಯನ್ನು ಕೂರಿಸಿಕೊಂಡು ಬಾಡಿಗೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.


ಆಟೋ ರಿಕ್ಷಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಪ್ಪಿನಮೊಗರು ತಲುಪಿದಾಗ ಚಾಲಕ ಹನೀಫ್ ರಿಗೆ ಕಣ್ಣು ಮಂಜಾದಂತಾಗಿದ್ದು, ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ವೇಳೆ ಸಾರ್ವಜನಿಕರು ಹನೀಫ್ ರನ್ನು ಆರೈಕೆ ಮಾಡಿದ್ದರು. ಬಳಿಕ ಸುಧಾರಿಸಿಕೊಂಡ ಅವರು ರಿಕ್ಷಾ ಚಲಾಯಿಸಿಕೊಂಡು ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋದರೂ ನೇತ್ರಾವತಿ ಸೇತುವೆ ತಲುಪಿದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *