Connect with us

BELTHANGADI

ನೆರೆ ಸಂತ್ರಸ್ಥರಿಗೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ ಆಟೋ ಚಾಲಕ

ನೆರೆ ಸಂತ್ರಸ್ಥರಿಗೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ ಆಟೋ ಚಾಲಕ

ಬೆಳ್ತಂಗಡಿ ಅಗಸ್ಟ್ 12: ನೆರೆ ಸಂತ್ರಸ್ಥರಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಅಟೋ ಚಾಲಕರೋಬ್ಬರು ಮಾನವೀಯತೆ ಮೆರೆದಿದ್ದಾರೆ.

ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಹೊನಪ್ಪ ಗೌಡ ಅವರು ನೆರೆ ಸಂತ್ರಸ್ಥರಿಗೆ ತಮ್ಮ ಗಳಿಕೆಯ 1 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಜನರಲ್ಲಿ ನೆರ ಸಂತ್ರಸ್ಥರಿಗೆ ನೆರವಾಗಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಶಾಸಕರ ಈ ಮನವಿಗೆ ಸ್ಪಂದಿಸಿದ ಆಟೋ ಚಾಲಕ ಹೊನಪ್ಪ ಗೌಡ ಅವರು 1 ಲಕ್ಷ ರೂಪಾಯಿ ಸಹಾಯವನ್ನು ಶಾಸಕರ ಕಚೇರಿಯಲ್ಲಿ ನೀಡಿದ್ದಾರೆ.
ನೆರೆ ಸಂತ್ರಸ್ತರನ್ನು ಕಂಡು ಮಿಡಿದ ಆಟೋ ಚಾಲಕ ಹೊನಪ್ಪ ಗೌಡ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Facebook Comments

comments