LATEST NEWS
ಉಳ್ಳಾಲ ಕುಂಪಲದಲ್ಲಿ ಆಟೋ ಚಾಲಕ ನೇಣಿಗೆ ಶರಣು..!

ಉಳ್ಳಾಲ : ಆಟೋ ಚಾಲಕನೋರ್ವ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಉಳ್ಳಾಲ ಕುಂಪಲ ದ ಲಕ್ಷ್ಮಿ ಗುಡ್ಡೆ ಎಂಬಲ್ಲಿ ನಡೆದಿದೆ. ಕುಂಪಲ ಆಶ್ರಯ ಕಾಲನಿ ನಿವಾಸಿ ಧನರಾಜ್ ಪೂಜಾರಿ(32) ಜೀವಾಂತ್ಯ ಮಾಡಿಕೊಂಡ ಆಟೋ ಚಾಲಕನಾಗಿದ್ದಾನೆ.
ಆಶ್ರಯ ಕಾಲನಿಯಲ್ಲಿ ನೆಲೆಸಿದ್ದ ಧನರಾಜ್ ಕುಟುಂಬವು ಮನೆ ನವೀಕರಣ ಹಿನ್ನೆಲೆಯಲ್ಲಿ ಸಮೀಪದ ಲಕ್ಷ್ಮೀಗುಡ್ಡೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅವಿವಾಹಿತನಾಗಿರುವ ಧನರಾಜ್ ದೇರಳಕಟ್ಟೆಯ ಯೆನೆಪೋಯ ರಿಕ್ಷಾ ಪಾರ್ಕಲ್ಲಿ ಆಟೋ ರಿಕ್ಷಾ ಚಲಾಯಿಸುತ್ತಿದ್ದರು. ಧನರಾಜ್ ತಾಯಿ ಕೆಲಸ ಮುಗಿಸಿ ಮನೆಗೆ ಮರಳಿದಾಗ ಧನರಾಜ್ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡೆಇಕೊಂಡಿದ್ದಾರೆ.
ರಿಕ್ಷಾ ಚಾಲಕರಾಗಿದ್ದ ಮೃತ ಧನರಾಜ್ ತಂದೆ ಲಿಂಗಪ್ಪ ಪೂಜಾರಿ ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಧನರಾಜ್ ಮನನೊಂದು ಆತ್ಮ ಹತ್ಯೆಗೈದಿರುವ ಶಂಕೆ ಇದೆ. ಹಿಂದೂ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಧನರಾಜ್ ತಂದೆ,ತಾಯಿ,ಸಹೋದರನನ್ನು ಅಗಲಿದ್ದಾನೆ.