LATEST NEWS
ದಲಿತ ಮಹಿಳೆಯ ಮಾನಭಂಗಕ್ಕೆ ಯತ್ನ, ಮಹಿಳೆ ಮನೆಗೆ ಸಚಿವ ಎಸ್.ಅಂಗಾರ ಭೇಟಿ

ಕಡಬ, ಅಕ್ಟೋಬರ್ 24: ಬಟ್ಟೆ ಮಾರಲು ಬಂದ ಇಬ್ಬರು ಆರೋಪಿಗಳಿಂದ ದಲಿತ ಮಹಿಳೆಯ ಮಾನಭಂಗಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಹಲ್ಲೆ ನಡೆಸಿದ ಐವರು ಸ್ಥಳೀಯರನ್ನು ಕಡಬ ಪೋಲೀಸರು ಬಂಧಿಸಿದ್ದಾರೆ.
ಈ ನಡುವೆ ಮಾನಭಂಗಕ್ಕೆ ಒಳಗಾದ ಮಹಿಳೆಯ ಮನೆಗೆ ಸಚಿವ ಎಸ್.ಅಂಗಾರ ಭೇಟಿ ನೀಡಿ ಮಹಿಳೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಕಾಣಿಯೂರು ಸಮೀಪದ ದೋಲ್ಪಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು,ಬಟ್ಟೆ ವ್ಯಾಪಾರದ ನೆಪದಲ್ಲಿ ರಫೀಕ್ ಮತ್ತು ರಮಿಯಾಸುದ್ಧೀನ್ ಎನ್ನುವವರು ದಲಿತ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದು, ಮಹಿಳೆ ಬೊಬ್ಬೆ ಹೊಡೆದ ಸಂದರ್ಭದಲ್ಲಿ ಕಾರಿನಲ್ಲಿ ತಪ್ಪಿಸಿಕೊಂಡಿದ್ದ ಆರೋಪಿಗಳನ್ನು ಸ್ಥಳೀಯರು ಸೇರಿ ಹಿಡಿದಿರುವುದಲ್ಲದೆ,ಇಬ್ಬರ ಮೇಲೂ ಹಲ್ಲೆ ನಡೆಸಿದ್ದರು.

ಆರೋಪಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ವಿಚಾರವಾಗಿ ವಿಧಾನಸಭೆ ಉಪನಾಯಕ ಯು.ಟಿ.ಖಾದರ್ ಖಂಡಿಸಿದ್ದು,ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮಕ್ಕೂ ಆಗ್ರಹಿಸಿದ್ದಾರೆ.