BANTWAL
ಯುವತಿಯ ಮಾನಭಂಗಕ್ಕೆ ಯತ್ನ, ಗ್ರಾಮಪಂಚಾಯತ್ ಸಿಬ್ಬಂದಿ ಬಂಧನ
ವಿಟ್ಲ, ಅಕ್ಟೋಬರ್ 12: ಶೌಚಾಲಯಕ್ಕೆ ಬಂದಿದ್ದ ಯುವತಿಯ ಕೈ ಹಿಡಿದು ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಪುಣಚ ಗ್ರಾಮ ಪಂಚಾಯತ್ ನೌಕರನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಪಂಚಾಯತ್ ನೌಕರ ಉಸ್ಮಾನ್ ಬಂಧಿತ ಆರೋಪಿ. ಇಲ್ಲಿನ ಮೆಡಿಕಲ್ ಶಾಪ್ ಉದ್ಯೋಗಿಯಾಗಿದ್ದ ದಲಿತ ಸಮುದಾಯದ ಯುವತಿ ಶೌಚಾಲಯಕ್ಕೆ ಬಂದಾಗ ಆರೋಪಿ ಅಸಭ್ಯವಾಗಿ ವರ್ತಿಸಿದ್ದನೆನ್ನಲಾಗಿದೆ. ಈ ಬಗ್ಗೆ ಸಂತ್ರಸ್ತೆ ನೀಡಿರುವ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.