Connect with us

LATEST NEWS

ಎಟಿಎಂ ದರೋಡೆ ಯತ್ನ – ಕಳ್ಳರು ಪರಾರಿ

ಎಟಿಎಂ ದರೋಡೆ ಯತ್ನ – ಕಳ್ಳರು ಪರಾರಿ

ಪುತ್ತೂರು, ಸೆಪ್ಟೆಂಬರ್ 16: ಎಟಿಎಂ ದೋಚಲು ವಿಫಲ ಯತ್ನ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಫುತ್ತೂರಿನ ಬಿಳಿನೆಲೆ ಗ್ರಾಮದ ನೆಟ್ಟಣ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಈ ಘಟನೆ ನಡೆದಿದೆ. ನೆಟ್ಟಣ ದುರ್ಗಾ ಕಾಂಪ್ಲೆಕ್ಸ್ನಲ್ಲಿರುವ ವಿಜಯ ಬ್ಯಾಂಕ್ ಎಟಿಎಂನಲ್ಲಿ ಈ ಘಟನೆ ನಡೆದಿದೆ.

ಕಳ್ಳರು ಸೆಕ್ಯೂರಿಟಿ ಗಾರ್ಡ್ ಇಲ್ಲದ ಸಮಯ ಎಟಿಎಂ ದರೋಡೆಗೆ ಯತ್ನಿಸಿದ್ದಾರೆ. ಕಳ್ಳತನಕ್ಕೂ ಮೊದಲು ಸಿಸಿಟಿವಿ ಕ್ಯಾಮರಾ ಹಾಗೂ ಸೈರನ್ ಕನೆಕ್ಷನ್ ತಪ್ಪಿಸಿ ದರೊಡೆಗೆ ಯತ್ನಿಸಿದ್ದಾರೆ. ಕಳ್ಳರು ಎಟಿಎಂ ಮೆಶಿನ್ ನ್ನು ಒಡೆಯುವ ಶಬ್ದವನ್ನು ಕೇಳಿ ಕಟ್ಟಡದ  ಮಹಡಿಯ ಮೇಲಿದ್ದ ಕಟ್ಟಡ ಮಾಲಿಕ ಹೊರಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಕಟ್ಟಡ ಮಾಲಿಕನನ್ನು ನೋಡಿದ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments