LATEST NEWS
ಸೌದಿ ಬೀಸಿಗಾಳಿಗೆ ಪವಿತ್ರ ಮೆಕ್ಕಾ ಯಾತ್ರೆಗೆ ತೆರಳಿದ್ದ 550ಕ್ಕೂ ಅಧಿಕ ಯಾತ್ರಿಗಳ ಸಾವು

ರಿಯಾದ್ ಜೂನ್ 19: ಸೌದಿ ಅರೇಬಿಯಾದಲ್ಲಿ ಬೀಸುತ್ತಿರುವ ಬಿಸಿಗಾಳಿಗೆ ಪವಿತ್ರ ಮೆಕ್ಕಾ ಯಾತ್ರೆಗೆ ತೆರಳಿದ್ದ ವಿವಿಧ ರಾಷ್ಟ್ರಗಳ ಸುಮಾರು 550 ಯಾತ್ರಿಗಳು ಮೃತಪಟ್ಟಿದ್ದಾರೆ’ ಎಂದು ವರದಿಯಾಗಿದೆ.
ಮೃತಪಟ್ಟವರಲ್ಲಿ 323 ಯಾತ್ರಿಗಳು ಈಜಿಪ್ಟ್ ಹಾಗೂ 60 ಜನ ಜೋರ್ಡಾನ್ ದೇಶಕ್ಕೆ ಸೇರಿದವರಾಗಿದ್ದಾರೆ. ಬಹುತೇಕ ಬಿಸಿ ಗಾಳಿಯಿಂದಾಗಿ ಸಾವನಪ್ಪಿದ್ದಾರೆ. ಮೆಕ್ಕಾ ಸುತ್ತಮುತ್ತಲಿನ ತಾಪಮಾನ 51.8 ಡಿಗ್ರಿ ಸೆಲ್ಸಿಯಸ್ ಇದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 0.4 ಡಿಗ್ರಿಯಷ್ಟು ಹೆಚ್ಚು. ಮೃತಪಟ್ಟ ತನ್ನ ದೇಶದ ನಾಗರಿಕರ ಪತ್ತೆಗೆ ಸೌದಿ ಅಧಿಕಾರಿಗಳೊಂದಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಈಜಿಪ್ಟ್‌ನ ವಿದೇಶಾಂಗ ಸಚಿವ ಹೇಳಿದ್ದಾರೆ. ಶಾಖಾಘಾತದಿಂದ ಬಳಲುತ್ತಿರುವ ಸುಮಾರು ಎರಡು ಸಾವಿರ ಯಾತ್ರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೌಧಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷದ ವಿವಿಧ ಕಾರಣಗಳಿಂದ 240 ಯಾತ್ರಿಗಳು ಮೆಕ್ಕಾದಲ್ಲಿ ಮೃತಪಟ್ಟಿದ್ದರು. ಇವರಲ್ಲಿ ಬಹುತೇಕರು ಇಂಡೊನೇಷ್ಯಾದವರಾಗಿದ್ದರು ಎಂದು ವರದಿಯಾಗಿದೆ. ಈ ಬಾರಿ 18 ಲಕ್ಷ ಜನ ಹಜ್ ಯಾತ್ರೆ ಕೈಗೊಂಡಿದ್ದಾರೆ. ಇವರಲ್ಲಿ 16 ಲಕ್ಷ ಜನ ವಿದೇಶದವರಾಗಿದ್ದಾರೆ ಎಂದು ಸೌಧಿ ಆಡಳಿತ ಹೇಳಿದೆ.