Connect with us

    LATEST NEWS

    ಮುಂಬೈ – ಪುಣೆ ಎಕ್ಸಪ್ರೇಸ್ ವೇ ನಲ್ಲಿ ಬೆಂಕಿಗಾಹುತಿಯಾದ ಮೆಥನಾಲ್ ಟ್ಯಾಂಕರ್ – ನಾಲ್ವರ ಸಜೀವ ದಹನ

    ಮುಂಬೈ ಜೂನ್ 13: ಮಹಾರಾಷ್ಟ್ರದ ಲೋನಾವಾಲಾ ಬಳಿ ಮುಂಬೈ – ಪುಣೆ ಎಕ್ಸ್​ಪ್ರೆಸ್​ವೇಯಲ್ಲಿ ಮೆಥನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಸಾವನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.


    ಲೋನಾವಾಲಾದ ಗಿರಿಧಾಮದ ಬಳಿ ಇರುವ ಮೇಲ್ಸೇತುವೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪುಣೆ ಗ್ರಾಮಾಂತರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಸಾಯನಿಕ ಪದಾರ್ಥ ತುಂಬಿದ್ದ ಟ್ಯಾಂಕರ್‌ ಉರುಳಿದ ಕೂಡಲೇ ಬೆಂಕಿ ಸ್ಫೋಟಗೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಟ್ಯಾಂಕರ್‌ನ ಸಮೀಪದಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೂ ಬೆಂಕಿ ತಗುಲಿತ್ತು.

    ಲೋನಾವಾಲಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಾಹಿತಿ ಪ್ರಕಾರ “ನಾವು ಆರಂಭದಲ್ಲಿ ಇದು ತೈಲ ಟ್ಯಾಂಕರ್ ಎಂದು ಭಾವಿಸಿದ್ದೇವೆ. ಅದರಲ್ಲಿ ಮೆಥೆನಾಲ್ ತುಂಬಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸಾವನ್ನಪ್ಪಿದ ನಾಲ್ವರಲ್ಲಿ ಒಬ್ಬರು ಟ್ಯಾಂಕರ್ ಕ್ಯಾಬಿನ್‌ನಲ್ಲಿದ್ದರು ಮತ್ತು ಉಳಿದವರು ಸೇತುವೆಯ ಕೆಳಗೆ ಹಾದುಹೋಗುವ ವಾಹನಗಳಲ್ಲಿದ್ದರು. ಗಾಯಗೊಂಡ ಮೂವರಲ್ಲಿ ಇಬ್ಬರು ಟ್ಯಾಂಕರ್ ಕ್ಯಾಬಿನ್‌ನಲ್ಲಿದ್ದರು ಮತ್ತು ಒಬ್ಬರು ಕೆಳಗಿನ ವಾಹನದಲ್ಲಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply