LATEST NEWS
ಸುಬ್ರಹ್ಮಣ್ಯ ನೈತಿಕ ಪೊಲೀಸ್ ಗಿರಿಗೆ ಟ್ವಿಸ್ಟ್ – ಪೊಲೀಸರ ಮೇಲೆ ಆರೋಪ ಮಾಡಿದ ಚಿತ್ರನಟಿ

ಸುಬ್ರಹ್ಮಣ್ಯ ನೈತಿಕ ಪೊಲೀಸ್ ಗಿರಿಗೆ ಟ್ವಿಸ್ಟ್ – ಪೊಲೀಸರ ಮೇಲೆ ಆರೋಪ ಮಾಡಿದ ಚಿತ್ರನಟಿ
ಸುಳ್ಯ ಡಿಸೆಂಬರ್ 31: ಸುಬ್ರಹ್ಮಣ್ಯದಲ್ಲಿ ವಾರದ ಹಿಂದೆ ನಡೆದಿದೆ ಎನ್ನಲಾದ ನೈತಿಕ ಪೊಲೀಸ್ ಗಿರಿ ಈಗ ವಿಚಿತ್ರ ತಿರವು ಪಡೆದುಕೊಂಡಿದ್ದು , ಸುಬ್ರಹ್ಮಣ್ಯ ಪೊಲೀಸರೇ ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಚಿತ್ರನಟಿಯೊಬ್ಬರು ಸೋಶಿಯಲ್ ಮಿಡಿಯಾದಲ್ಲಿ ಆರೋಪ ಮಾಡಿದ್ದಾರೆ.
ವಾರದ ಹಿಂದೆ ಸುಬ್ರಹ್ಮಣ್ಯ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಒರ್ವ ಯುವತಿ ಹಾಗೂ ಇಬ್ಬರು ಯುವಕರನ್ನು ಸಾರ್ವಜನಿಕರು ಹಿಡಿದು ಪೋಲೀಸರಿಗೆ ಒಪ್ಪಿಸಿದ ಘಟನೆ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ಪೋಲೀಸರು ತನ್ನ ಮೇಲೆ ಹಾಗೂ ತನ್ನ ಜೊತೆಯಿದ್ದ ಮುಸ್ಲಿಂ ಯುವಕರಿಗೆ ಮುಸ್ಲಿಂ ಎನ್ನುವ ಕಾರಣಕ್ಕೆ ದೌರ್ಜನ್ಯ ನಡೆಸಿದ್ದಾರೆ ಎಂದು ಯುವತಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಹೇಳಿಕೆಯನ್ನು ಬಿತ್ತರಿಸಿದ್ದಾಳೆ. ತಮಿಳು ಚಿತ್ರ ನಟಿ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ ಯುವತಿ ಹಾಗೂ ಇಬ್ಬರು ಯುವಕರು ಸುಬ್ರಹ್ಮಣ್ಯ ಪರಿಸರದಲ್ಲಿ ಅಸಹ್ಯವಾಗಿ ವ್ಯವಹರಿಸುತ್ತಿದ್ದರು ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಈ ಮೂವರನ್ನು ವಶಕ್ಕೆ ಪಡೆಯಲು ಮುಂದಾಗಿದ್ದ ಸಂದರ್ಭದಲ್ಲಿ ಒರ್ವ ಯುವಕ ಪರಾರಿಯಾಗಿದ್ದ.
ತಮ್ಮ ಕೈಗೆ ಸಿಕ್ಕಿದ ಇಬ್ಬರನ್ನು ಸಂಘಟನೆಗೆ ಸೇರಿದವರು ಪೋಲೀಸ್ ವಶಕ್ಕೆ ನೀಡಿದ್ದರು. ಸುಬ್ರಹ್ಮಣ್ಯ ಪೋಲೀಸರು ವಿಚಾರಣೆ ನಡೆಸಿ ಬಳಿಕ ಬಿಡುಗಡೆಗೊಳಿಸಿದ್ದರು. ಇದೀಗ ಯುವತಿ ತನ್ನ ಹಾಗೂ ತನ್ನ ಜೊತೆಗಿದ್ದ ಯುವಕನ ಮೇಲೆ ಪೋಲೀಸರು ದೌರ್ಜನ್ಯ ನಡೆಸಿದ್ದಾರೆ ಎನ್ನುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುವ ಮೂಲಕ ಹೊಸ ವಿವಾದಕ್ಕೆ ಕಾರಣವಾಗಿದೆ