LATEST NEWS
ಲೇಡಿ ಸಿಂಗಂ ಖ್ಯಾತಿಯ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಅಪಘಾತದಲ್ಲಿ ಸಾವು….!!
ಅಸ್ಸಾಂ ಮೇ 17: ಲೇಡಿ ಸಿಂಗಂ ದಬಾಂಗ್ ಲೇಡಿ ಎಂದು ಪ್ರಖ್ಯಾತಿ ಪಡೆದಿದ್ದ ಅಸ್ಸಾಂ ನ ಮಹಿಳಾ ಪೊಲೀಸ್ ಸಬ್ ಇನ್ಸ ಪೆಕ್ಟರ್ ಜುನ್ಮೋನಿ ರಾಭಾ ಅಪಘಾತದಲ್ಲಿ ಸಾವನಪ್ಪಿದ್ದಾರೆ, ಜುನ್ಮೋನಿ ರಾಭಾ ಅವರು ಮಂಗಳವಾರ ನಾಗಾಂವ್ ಜಿಲ್ಲೆಯಲ್ಲಿ ಕಂಟೈನರ್ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ 30 ವರ್ಷ ವಯಸ್ಸಿನ ಜುನ್ಮೋನಿ ರಾಭಾ ತಮ್ಮ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ‘ಲೇಡಿ ಸಿಂಘಮ್’ ಅಥವಾ ‘ದಬಾಂಗ್ ಪೋಲೀಸ್’ ಎಂದು ಕರೆಯಲ್ಪಟ್ಟಿದ್ದರು.
ಕಲಿಯಾಬೋರ್ ಉಪವಿಭಾಗದ ಜಖಲಬಂಧ ಪೊಲೀಸ್ ಠಾಣೆ ವ್ಯಾಪ್ತಿಯ ಸರುಭುಗಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಪಘಾತದ ವೇಳೆ ಎಸ್‌ಐ ರಾಭಾ ಅವರು ಖಾಸಗಿ ಕಾರಿನಲ್ಲಿ ಒಬ್ಬರೇ ಇದ್ದು ಸಮವಸ್ತ್ರದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಮುಂಜಾನೆ 2:30 ರ ಸುಮಾರಿಗೆ ಪೊಲೀಸ್ ಗಸ್ತು ತಂಡವು ಸ್ಥಳಕ್ಕೆ ಧಾವಿಸಿ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಿಂದ ಬರುತ್ತಿದ್ದ ಕಂಟೈನರ್ ಟ್ರಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ರಭಾ ಅವರು ಪ್ರಸ್ತುತ ಮೊರಿಕೊಲಾಂಗ್ ಪೊಲೀಸ್ ಔಟ್‌ಪೋಸ್ಟ್‌ನ ಉಸ್ತುವಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಪಘಾತದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ರಭಾ ಅವರ ಕುಟುಂಬವು ಅಪಘಾತದ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದೆ. ಈ ಹಿನ್ನಲೆ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಅಸ್ಸಾಂ ಡಿಜಿಪಿ ಜಿಪಿ ಸಿಂಗ್ ಹೇಳಿದ್ದಾರೆ.
ಜುನ್ಮೋನಿ ರಾಭಾ ಯಾರು?
‘ಲೇಡಿ ಸಿಂಗಮ್’ ಜುನ್ಮೋನಿ ರಭಾ ಬಿಹ್ಪುರಿಯ ಬಿಜೆಪಿ ಶಾಸಕ ಅಮಿಯಾ ಕುಮಾರ್ ಭುಯಾನ್ ಅವರೊಂದಿಗಿನ ನಡೆಸಿದ ದೂರವಾಣಿ ಸಂಭಾಷಣೆ ಲೀಕ್ ಆದ ಬಳಿಕ ಜನಪ್ರಿಯರಾದರು. ಅಲ್ಲದೆ ಹಲವು ಕಷ್ಟಕರ ಪ್ರಕರಣವನ್ನು ಧೈರ್ಯವಾಗಿ ಎದುರಿಸಿದ್ದ ಅವರು ಉದ್ಯೋಗದ ಹೆಸರಿನಲ್ಲಿ ವಂಚಿಸಿದ್ದ ಭಾವಿ ಪತಿಯನ್ನು ಬಂಧಿಸಿ ಬಾರೀ ಪ್ರಶಂಸೆ ಪಡೆದಿದ್ದರು.