Connect with us

    KARNATAKA

    ಕಬ್ಬಿಣದ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎಎಸ್ಐ ಚಿಕಿತ್ಸೆ ಫಲಕಾರಿಯಾಗದೇ ನಿಧನ

    ಹುಬ್ಬಳ್ಳಿ, ಸೆಪ್ಟೆಂಬರ್​​ 15: ಫ್ಲೈಓವರ್ ಕಾಮಗಾರಿಯ ವೇಳೆ ಕಬ್ಬಿಣದ ರಾಡ್​ ಬಿದ್ದು ಗಾಯಗೊಂಡಿದ್ದ ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್​ಐ ನಾಭಿರಾಜ್ ದಯಣ್ಣವರ (59)ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


    ಸೆಪ್ಟೆಂಬರ್​ 10ರಂದು ಕೋರ್ಟ್ ವೃತ್ತದ ಬಳಿ ಕರ್ತವ್ಯದ ವೇಳೆ ಫ್ಲೈಓವರ್ ಕಾಮಗಾರಿಯ ರಾಡ್​ ಬಿದ್ದು ಎಎಸ್​ಐ ನಾಭಿರಾಜ್ ದಯಣ್ಣವರ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೆ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಇಂದು (ಸೆ.15) ಚಿಕಿತ್ಸೆ ಫಲಿಸದೆ ಎಎಸ್​ಐ ನಾಭಿರಾಜ್ ದಯಣ್ಣವರ ಕೊನೆಯುಸಿರೆಳೆದಿದ್ದಾರೆ.

     

    ಗುತ್ತಿಗೆದಾರರ ನಿರ್ಲಕ್ಷ್ಯ ಹಿನ್ನೆಲೆ ಅವಘಡ ಸಂಭವಿಸಿದೆ ಎಂದು ಝಂಡು ಕನ್​ಸ್ಟ್ರಕ್ಷನ್ ನಿರ್ದೇಶಕರಾದ ರಾಮ್‌ಕುಮಾರ್, ಮೋಹಿತ್ ಮತ್ತು ಮನುದೀಪ್, ಯೋಜನಾ ನಿರ್ದೇಶಕ, ಎಂಜಿನಿಯರ್, ಸುರಕ್ಷತಾ ಅಧಿಕಾರಿ, ಕ್ರೇನ್ ಆಪರೇಟರ್ ಮತ್ತು ಕಾರ್ಮಿಕರ ವಿರುದ್ಧ ಎಎಸ್‌ಐ ಪುತ್ರ ರುಷಭ್ ದೂರು ದಾಖಲಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply