UDUPI
ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ
ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ
ಉಡುಪಿ ಫೆಬ್ರವರಿ 12 : ಜಂತುಹುಳ ಭಾದೆಯಿಂದ ಮಕ್ಕಳು ರೋಗಗ್ರಸ್ತರಾಗದಂತೆ , ಆಲ್ಬಂಡಝೋಲ್ ಮಾತ್ರೆ ನೀಡುವುದರ ಮೂಲಕ ಜಂತುಹುಳ ನಿವಾರಣೆ ಮಾಡಬಹುದೆಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಹೇಳಿದರು.
ಅವರಿಂದು ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಉಡುಪಿ ಜಿಲ್ಲೆ , ರೋಟರಿ ಕ್ಲಬ್ ಮತ್ತು ಲಯನ್ಸ್ ಕ್ಲಬ್‍ನ ಸಹಯೋಗದಿಂದ ಎಲ್.ವಿ.ಪಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಇಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಅನೇಕ ರೋಗಗಳು ಸಾವಿನೆಡಗೆ ಸೆಳೆದುಕೊಂಡು ಹೋಗುತ್ತಿದ್ದವು, ಆದರೆ ವಿಜ್ಞಾನದ ಕ್ರಾಂತಿಯಿಂದ ಸರ್ಕಾರದ ಸಹಕಾರದಿಂದ ಎಲ್ಲವೂ ಬದಲಾಗಿದೆ. ಸರ್ಕಾರವು ಸಮಾಜದಲ್ಲಿ ಕಾಡುತ್ತಿರುವ ರೋಗಗಳಿಗೆ ನಿವಾರಣಾ ಅಡಿಪಾಯ ಹಾಕಿದೆ .ಸಾಂಕ್ರಾಮಿಕ ರೋಗದಿಂದ ಭಾವಿ ಜನಾಂಗವನ್ನು ರಕ್ಷಿಸುವ ಮಹತ್ತರ ಜವಾಬ್ದಾರಿಯೂ ನಮ್ಮದಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ 1 ರಿಂದ 19 ವರ್ಷದ ಮಕ್ಕಳಿಗೆ ಆಲ್ಬೆಂಡಝೋಲ್ ಮಾತ್ರೆ ಉಚಿತವಾಗಿ ನೀಡಲಾಗುತ್ತಿದ್ದು, ಜಂತು ಹುಳು ಭಾದೆಯಿಂದ ರಕ್ಷಿಸಲು ಪೂರಕವಾಗಿದೆ. ಮಕ್ಕಳಲ್ಲಿ ರಕ್ತಹೀನತೆ ಪೌಷ್ಠಿಕತೆಯನ್ನು ಸುಧಾರಿಸಲು ಒಟ್ಟು 2,54,832 ಮಕ್ಕಳಿಗೆ ಆಲ್ಬೆಂಡಝೋಲ್ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರೋಹಿಣಿ ಹೇಳಿದರು.