Connect with us

    LATEST NEWS

    ಕುಡಿಯುವ ನೀರಿನ ಟ್ಯಾಂಕ್ ನಲ್ಲಿತ್ತು 13 ಮಂಗಗಳ ಶವ……!

    ಸಾರ್ವಜನಿಕರು ಉಪಯೋಗಿಸುತ್ತಿದ್ದ ನೀರಿನ ಟ್ಯಾಂಕ್ ನಲ್ಲಿದ್ದ ಶವ

    ಗುವಾಹಟಿ, ಜೂನ್ 9: ಕೇರಳದಲ್ಲಿ ಗರ್ಭಿಣಿ ಆನೆಯನ್ನು ಕೊಂದ ವಿಚಾರ ಮನ ಕಲಕಿರುವಾಗಲೇ ಅಸ್ಸಾಂನಲ್ಲಿ 13 ಮಂಗಗಳು ನೀರಿನ ಟಾಂಕಿಗೆ ಬಿದ್ದು ಸಾಮೂಹಿಕವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.


    ಅಸ್ಸಾಂ ರಾಜ್ಯದ ಕಾಚಾರ್ ಜಿಲ್ಲೆಯ ಕತಿರ್ಲಾಲ್ ಎಂಬಲ್ಲಿ ಈ ಘಟನೆ ನಡೆದಿದ್ದು ಸುಮಾರು 350 ಕುಟುಂಬಗಳು ಕುಡಿಯಲು ಉಪಯೋಗಿಸುತ್ತಿದ್ದ ನೀರಿನ ಟಾಂಕಿಯಲ್ಲಿ 13 ಮಂಗಗಳ ಶವಗಳು ತೇಲುತ್ತಿದ್ದುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳು ಶವಗಳನ್ನು ಮೇಲೆತ್ತಿ ಪೋಸ್ಟ್ ಮಾರ್ಟಂ ಮಾಡಲು ಕಳಿಸಿದ್ದಾರೆ‌.

    ಮಂಗಗಳಿಗೆ ಯಾರೋ ವಿಷ ಹಾಕಿರುವ ಸಾಧ್ಯತೆ ಬಗ್ಗೆ ಸ್ಥಳೀಯರು ಶಂಕಿಸಿದ್ದಾರೆ. ವಿಷಾಹಾರ ಸೇವಿಸಿದ ಬಳಿಕ ಉಸಿರುಗಟ್ಟಿದ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳಲು ನೀರಿಗೆ ಹಾರಿದ್ದಿರಬೇಕೆಂದು ಹೇಳಲಾಗುತ್ತಿದೆ. “ಇವೆಲ್ಲ ಸ್ಥಳೀಯ ಮಂಗಗಳ ಜಾತಿಗೆ ಸೇರಿದವುಗಳು‌. ಈಗಾಗ್ಲೇ ಮಂಗಗಳ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಲು ಕಳಿಸಿದ್ದೇವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸುತ್ತೇವೆ ಎಂದು ವಲಯ ಅರಣ್ಯಾಧಿಕಾರಿ ಜಲ್ನೂರ್ ಆಲಿ ಹೇಳಿದ್ದಾರೆ.

    ಆದರೆ, ಸಾರ್ವಜನಿಕರು ಉಪಯೋಗಿಸುತ್ತಿದ್ದ ನೀರಿನ ಟಾಂಕಿಯಲ್ಲಿ ಮಂಗಗಳು ಬಿದ್ದು ಸತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply