Connect with us

LATEST NEWS

ಬಿಜೆಪಿ ಮುಖಂಡ ಜ್ಯೋತಿರಾಧಿತ್ಯ ಸಿಂಧ್ಯಾ ಗೆ ಕೊರೊನಾ ಪಾಸಿಟೀವ್

ದೆಹಲಿ ಆಸ್ಪತ್ರೆ ದಾಖಲು…

ನವದೆಹಲಿ, ಜೂನ್ 09: ಕೇಂದ್ರ ಮಾಜಿ ಸಚಿವ ಹಾಗೂ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡ ಮಧ್ಯಪ್ರದೇಶ ರಾಜಮನೆತನದ ಜ್ಯೋತಿರಾದಿತ್ಯ ಸಿಂಧ್ಯಾ ಹಾಗೂ ಅವರ ತಾಯಿ ಮಾಧವಿ ರಾಜೆ ಸಿಂಧ್ಯಾ ರಲ್ಲಿ ಕೊರೊನಾ ಪಾಸಿಟೀವ್ ದೃಢಪಟ್ಟಿದೆ. ಇಬ್ಬರನ್ನೂ ಇದೀಗ ದೆಹಲಿಯ ಮಾಕ್ಸ್ ಸಾಕೇತ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜ್ಯೋತಿರಾಧಿತ್ಯ ಸಿಂಧ್ಯಾ ಹಾಗೂ ಅವರ ತಾಯಿಯಲ್ಲಿ ಕೊರೊನಾ ಸಂಬಂಧಿತ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಇಬ್ಬರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಇಬ್ಬರ ಗಂಟಲು ದ್ರವದ ರಿಪೋರ್ಟ್ ಬಂದಿದ್ದು, ಇಬ್ಬರಿಗೂ ಕೊರೊನಾ ಪಾಸಿಟೀವ್ ದೃಢಪಟ್ಟಿದೆ.

ಜ್ಯೋತಿರಾಧಿತ್ಯ ಸಿಂಧ್ಯಾ ಗೆ ಕೊರೊನಾ ಪಾಸಿಟೀವ್ ದೃಢಪಟ್ಟ ಹಿನ್ನಲೆಯಲ್ಲಿ ಈ ವಿಚಾರ ಇದೀಗ ಟ್ವೀಟರ್ ನಲ್ಲಿ ಟ್ರೆಂಡ್ ಆಗಲಾರಂಭಿಸಿದೆ. ಸಿಂಧ್ಯಾ ಪರವಾಗಿ ಹಾಗೂ ವಿರೋಧವಾಗಿ ಹಲವು ಟ್ವೀಟ್ ಗಳು ಹರಿದಾಡಲಾರಂಭಿಸಿದ್ದು, ಸಂಕಷ್ಟದ ಸಮಯದಲ್ಲೂ ಟ್ವೀಟರ್ ನಲ್ಲಿ ಸಿಂಧ್ಯಾ ವಿರುದ್ಧವಾಗಿ ಅಮಾನವೀಯ ರೀತಿಯ ಕಮೆಂಟ್ ಗಳು ಹರಿದಾಡುತ್ತಿದೆ.

Facebook Comments

comments