LATEST NEWS
ಫೋನ್ ಕೊಡದ ಹೆತ್ತವರ ಹತ್ಯೆಗೈಯ್ಯಲು ಸೂಚಿಸಿದ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
ಹೂಸದಿಲ್ಲಿ: ತಂತ್ರಜ್ಞಾನದ ಮಹಾ ಆವಿಷ್ಕಾರ ಎಂದು ಕರೆಸಿಕೊಳ್ಳುತ್ತಿರುವ ಕೃತಕ ಬುದ್ಧಿಮತ್ತೆ ದಿನೆ ದಿನೇ ಹೊಸ ಎಡವಟ್ಟುಗಳನ್ನು ಸೃಷ್ಟಿಸುತ್ತಲೇ ಇದೆ. ಫೋನ್ ಕೊಡದ ಪೋಷಕರನ್ನು ಕೊಲೆ ಮಾಡಲು ಸೂಚಿಸಿ ಈಗ ಎಐ ಚಾಟ್‌ಬಾಟ್‌ವೊಂದು ತೊಂದರೆಗೆ ಸಿಲುಕಿಕೊಂಡಿದೆ.
ಅಮೆರಿಕದ ಟೆಕ್ಸಾಸ್‌ನಲ್ಲಿ ಈ ಘಟನೆ ನಡೆದಿದ್ದು, ಚಾಟ್‌ಬಾಟ್‌ನ ಅಪಾಯಕಾರಿ ನಡೆಯ ವಿರುದ್ಧ ಪೋಷಕರು ದೂರು ನೀಡಿದ್ದಾರೆ.
“ಕ್ಯಾರೆಕ್ಟರ್.ಎಐ’ ಹೆಸರಿನ ಚಾಟ್‌ಬಾಟ್ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡಿದೆ ಎಂದು ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಚಾಟ್‌ಬಾಟ್, ದಶಕಗಳ ಕಾಲ ಪೋಷಕರಿಂದ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಗಾದ ಮಗ ಅವರನ್ನು ಕೊಲೆ ಮಾಡಿದ್ದಾನೆ ಎಂಬ ಸುದ್ದಿಯನ್ನು ಓದಿದ ಬಳಿಕ, ಹೀಗೆ ಉತ್ತರಿಸಿದ್ದಾಗಿ ಹೇಳಿದೆ.