Connect with us

    FILM

    ‘ಆರ್ಟಿಕಲ್ 370’ ಚಿತ್ರದ ನಟಿ ದಿವ್ಯಾ ಸೇಠ್ ಪುತ್ರಿ ಮಿಹಿಕಾ(20) ವಿಧಿವಶ..!

    ಮುಂಬೈ :  ಬಾಲಿವುಡ್‌ನ ಆರ್ಟಿಕಲ್ 370, ಜಬ್ ವಿ ಮೆಟ್ ಸಿನಿಮಾಗಳಲ್ಲಿ ನಟಿಸಿದ್ದ ನಟಿ ದಿವ್ಯಾ ಸೇಠ್ ಅವರ ಮಗಳು ಮಿಹಿಕಾ ಶಾ(20) ವಿಧಿವಶರಾಗಿದ್ದಾರೆ.

    ಮೂಲಗಳ ಪ್ರಕಾರ 20 ವರ್ಷದ ಮಿಹಿಕಾಗೆ ಜ್ವರ ಮತ್ತು ಮೂರ್ಛೆ ರೋಗವಿತ್ತು ಎನ್ನಲಾಗಿದೆ. ಮಗಳ ಸಾವನ್ನಪ್ಪಿದ್ದ ದುಃಖದ ಸುದ್ದಿಯನ್ನು ನಟಿ ದಿವ್ಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿದ್ದಾರೆ. ಮನೆ ಮಗಳು ಮಿಹಿಕಾಳ ನಿಧನದಿಂದ ದಿವ್ಯಾ ಸೇಠ್‌ ಕುಟುಂಬಕ್ಕೆ ಆಘಾತವಾಗಿದೆ.

    ಮಿಹಿಕಾ ನಿಧನಕ್ಕೆ ಚಿತ್ರರಂಗದ ಗಣ್ಯರು, ಆಪ್ತರು ಸಂತಾಪ ಸೂಚಿಸಿದ್ದಾರೆ. ಮಿಹಿಕಾರ ಅಜ್ಜಿ ಸುಷ್ಮಾ ಸೇಠ್ ಅವರು ‘ಕಭಿ ಖುಷಿ ಕಭಿ ಗಮ್’, ಕಲ್ ಹೋ ನ ಹೋ, ನಾಗಿನಾ, ತಮಾಷಾ ಸಿನಿಮಾ ಸೇರಿದಂತೆ ಅನೇಕ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply