LATEST NEWS
ಚಪ್ಪಲಿಯಲ್ಲಿ ಬ್ಲ್ಯೂಟೂತ್ ಅಳವಡಿಸಿ ಪರೀಕ್ಷೆ ಬರೆದ ಐವರು ಶಿಕ್ಷಕರು ಅರೆಸ್ಟ್: ಬ್ಲ್ಯೂಟೂತ್ ಚಪ್ಪಲಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ !
ಜೈಪುರ, ಸೆಪ್ಟೆಂಬರ್ 28: ಬ್ಲ್ಯೂಟೂತ್ ಸಾಧನ ಅಳವಡಿಸಿದ್ದ ಹೈಟೆಕ್ ಚಪ್ಪಲಿ ಧರಿಸಿ ರಾಜಸ್ಥಾನ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಕಾಪಿ ಚಿಟ್ ನಡೆಸುವ ಮೂಲಕ ಪರೀಕ್ಷಾ ವಂಚನೆ ನಡೆಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
6 ಲಕ್ಷ ದ ಚಪ್ಪಲಿ: ಬಂಧಿತರಿಂದ ವಶಕ್ಕೆ ಪಡೆಯಲಾದ ಚಪ್ಪಲಿ ಮೌಲ್ಯ ಬರೋಬ್ಬರಿ 6 ಲಕ್ಷ ರೂಪಾಯಿ. ಇತ್ತೀಚೆಗಷ್ಟೇ ಗ್ಯಾಂಗ್ ಒಂದು ತಲಾ 6 ಲಕ್ಷ ರೂ.ನಂತೆ 25 ಮಂದಿಗೆ ಚಪ್ಪಲಿಗಳನ್ನು ಮಾರಾಟ ಮಾಡಿತ್ತು.
ಬ್ಲ್ಯೂಟೂತ್ ಇರುವ ಚಪ್ಪಲಿಯ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರ ಹುಬ್ಬೇರಿಸಿದೆ. ಶಿಕ್ಷಕರ ಅರ್ಹತಾ ಪರೀಕ್ಷೆ ಎದುರಿಸಿದ್ದ ಕೆಲ ಅಭ್ಯರ್ಥಿಗಳ ಚಪ್ಪಲಿ ಮತ್ತು ಕಿವಿಯಲ್ಲಿ ಬ್ಲ್ಯೂಟೂತ್ ಸಾಧನ ಇರುವುದು ಪತ್ತೆಯಾದ ಬಳಿಕ ಅವರನ್ನು ವಿಚಾರಣೆ ನಡೆಸಿ ಬಂಧಿಸಲಾಗಿದೆ ಎಂದು ಅಜ್ಮೇರ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಬಂಧಿತ ಐವರಲ್ಲಿ ಓರ್ವ ಮಹಿಳೆಯು ಸೇರಿದ್ದಾರೆ. ಮಾರಾಟ ಮಾಡುತ್ತಿದ್ದವರನ್ನು ಸಹ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ.
You must be logged in to post a comment Login