LATEST NEWS
ದುರಂತಕ್ಕೀಡಾದ ಸೇನಾ ಹೆಲಿಕಾಪ್ಟರ್ ನ ಬ್ಲ್ಯಾಕ್ ಬಾಕ್ಸ್ ಪತ್ತೆ
ಚೆನ್ನೈ ಡಿಸೆಂಬರ್ 09: ನಿನ್ನೆ ಪತನಕ್ಕಿಡಾದ ಸೇನಾ ಹೆಲಿಕಾಪ್ಟರ್ ನ ಬ್ಲಾಕ್ ಬಾಕ್ಸ್ ಇಂದು ಪತ್ತೆಯಾಗಿದೆ. ಇದರಿಂದ ದುರಂತಕ್ಕೆ ನಿಖರ ಕಾರಣ ದೊರಕಲಿದೆ.
ಭಾರತೀಯ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 14 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಭಾರತೀಯ ವಾಯುಪಡೆಯ ಮಿ-17ವಿ5 ಸೇನಾ ಹೆಲಿಕಾಪ್ಟರ್ ತಮಿಳು ನಾಡಿನ ಕೂನೂರು ಬಳಿ ಭೀಕರ ದುರಂತಕ್ಕೀಡಾಗಿತ್ತು. ಈ ದುರ್ಘಟನೆಯಲ್ಲಿ ಭಾರತೀಯ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸಾವನಪ್ಪಿದ್ದಾರೆ.
ದುರಂತಕ್ಕೀಡಾದ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್ ಅಥವಾ ‘ಫ್ಲೈಟ್ ಡೇಟಾ ರೆಕಾರ್ಡರ್’ಗಾಗಿ ಇಂದು ಶೋಧ ಮುಂದುವರೆಸಲಾಗಿತ್ತು, ವಾಯುಪಡೆಯ ಸಿಬ್ಬಂದಿಗಳು ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿದ್ದು ಇಂದು ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಬ್ಲ್ಯಾಕ್ ಬಾಕ್ಸ್ ಪತ್ತೆಯಾದ ಕಾರಣ ಇದರಿಂದ ದುರಂತಕ್ಕೆ ನಿಖರ ಕಾರಣ ದೊರಕಲಿದೆ.
13 ಮಂದಿಯ ಮೃತದೇಹಗಳು ಇರುವ ವೆಲ್ಲಿಂಗ್ಟನ್ ನ ಸೇನಾಸ್ಪತ್ರೆಯಿಂದ ರವಾನೆ ಮಾಡಲಾಗುತ್ತಿದೆ. ತ್ರಿವರ್ಣ ಧ್ವಜದಿಂದ ಮುಚ್ಚಿರುವ ಪೆಟ್ಟಿಗೆಯಲ್ಲಿ ಪಾರ್ಥಿವ ಶರೀರಗಳನ್ನು ಇಟ್ಟು ಮೆರವಣಿಗೆ ಮೂಲಕ ಸಾಗಿಸಲಾಗುತ್ತಿದೆ.