Connect with us

    FILM

    ಬಿಗ್ ಬಾಸ್ ಓಟಿಟಿ ಸ್ಪರ್ಧಿಗಳ ಪ್ರಣಯದ ವಿಡಿಯೋ ವೈರಲ್ – ಸ್ಪಷ್ಟನೆ ನೀಡಿದ ಜಿಯೋ ಸಿನೆಮಾ

    ಮುಂಬೈ 23: ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋ ಜಿಯೋ ಸಿನೆಮಾ ಓಟಿಟಿಯಲ್ಲಿ ಪ್ರಸಾರವಾಗುತ್ತಿದ್ದು, ಈ ಬಾರಿ ವಿವಾದಕ್ಕೆ ಕಾರಣವಾಗಿದೆ. ನಿಜ ಜೀವನದಲ್ಲಿ ಗಂಡ ಹೆಂಡತಿಯಾಗಿರುವ ಸ್ಪರ್ಧಿಗಳ ಪ್ರಣಯ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪರ ವಿರೋಧ ಚರ್ಚೆಗಳು ನಡೆದಿವೆ. ಅಷ್ಟೇ ಅಲ್ಲ ಈ ಶೋ ಬ್ಯಾನ್‌ ಮಾಡುವಂತೆಯೂ ಮಾತುಗಳು ಕೇಳಿಬಂದಿದ್ದು, ಈ ಬಗ್ಗೆ ಇದೀಗ ಸ್ಟ್ರೀಮಿಂಗ್‌ ವೇದಿಕೆ ಜಿಯೋ ಸಿನಿಮಾ ವಿವರಣೆ ನೀಡಿದೆ.


    ಹಿಂದಿ ಬಿಗ್‌ ಬಾಸ್‌ ಒಟಿಟಿ ಸೀಸನ್‌ 3 ಪ್ರಾರಂಭವಾಗಿದ್ದು, ಸಲ್ಮಾನ್ ಖಾನ್ ಬದಲು ಈ ಬಾರಿ ಅನಿಲ್ ಕಪೂರ್ ನಡೆಸಿಕೊಡುತ್ತಿದ್ದಾರೆ. ಈ ನಡುವೆಯೇ ರೊಮ್ಯಾನ್ಸ್‌ ವಿಡಿಯೋ ಹೊರಬಿದ್ದಿದ್ದು, ಹಲ್‌ಚಲ್‌ ಸೃಷ್ಟಿಸಿದೆ. ಅರ್ಮಾನ್ ಮಲಿಕ್ ಮತ್ತು‌ ಅವರ ಎರಡನೇ ಪತ್ನಿ ಕೃತಿಕಾ ಮಲಿಕ್ ಜೋಡಿ ಬಿಗ್‌ ಬಾಸ್‌ ಲೈವ್‌ನಲ್ಲಿಯೇ ರಾತ್ರಿ 12:30ರ ಸುಮಾರಿಗೆ ಪ್ರಣಯದಲ್ಲಿ ತೊಡಗಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ. ಶೋ ಬ್ಯಾನ್ ಮಾಡುವಂತೆ ಶಿವಸೇನೆ ಆಗ್ರಹಿಸಿತ್ತು. ಟೀಕೆಗಳು ವ್ಯಕ್ತವಾದ ಬೆನ್ನಲ್ಲಿಯೇ ಜಿಯೋ ಸಿನಿಮಾ ಇದಕ್ಕೆ ಸ್ಪಷ್ಟನೆ ನೀಡಿದೆ.

    “ಜಿಯೋ ಸಿನಿಮಾ ಕಟ್ಟುನಿಟ್ಟಾದ ಪ್ರೋಗ್ರಾಮಿಂಗ್ ಮಾನದಂಡಗಳು ಮತ್ತು ಮಾರ್ಗಸೂಚಿಗಳಿಗೆ ಬದ್ಧವಾಗಿದೆ. ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಮಾಡಲಾದ ವಿಷಯವು ಗುಣಮಟ್ಟ ಮತ್ತು ಸೂಕ್ತವಾಗಿದೆ ಎಂದು ನಾವು ಖಚಿತಪಡಿಸುತ್ತೇವೆ. ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಮಾಡಲಾದ ಬಿಗ್ ಬಾಸ್ OTTನಲ್ಲಿ ಎಲ್ಲಿಯೂ ಅಂತಹ ಯಾವುದೇ ವಿಷಯವಿಲ್ಲ. ಯಾರೋ ಅಶ್ಲೀಲತೆಯೊಂದಿಗೆ ಆ ವೀಡಿಯೊ ಕ್ಲಿಪ್ ಅನ್ನು ಎಡಿಟ್‌ ಮಾಡಿದ್ದಾರೆ” ಎಂದಿದೆ.

     

    ವೀಕ್ಷಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ನಾವು ಬದ್ಧರಾಗಿದ್ದೇವೆ. ಇಂತಹ ನಕಲಿ ವಿಡಿಯೋಗಳನ್ನು ಪ್ರಸಾರ ಮಾಡುವುದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಜಿಯೋ ಸಿನಿಮಾ ಹೇಳಿದೆ. ಈ ಕ್ಲಿಪ್ ಎಲ್ಲಿಂದ ಬಂತು ಎಂಬುದನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಜತೆಗೆ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply