FILM
ನಟಿ ಅನಸೂಯ ಭಾರದ್ವಾಜ್ ಗ್ಲಾಮರಸ್ ಪೋಟೋ ವೈರಲ್

ಹೈದರಾಬಾದ್ ಮೇ 26 : ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ಪುಷ್ಪ ಚಿತ್ರದಲ್ಲಿ ನಟಿಸಿದ್ದ ತೆಲುಗಿನ ಸಹನಟಿ ಅನುಸೂಯ ಭಾರದ್ವಾಜ್ ಇದೀಗ ತಮ್ಮ ಹಾಟ್ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಪೋಟೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಅನಸೂಯಾ, ತಮ್ಮ ಬೋಲ್ಡ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಇದೀಗ ಅನಸೂಯ ಅವರು ಹಾಡ್ ಉಡುಗೆಯಲ್ಲಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಅನಸೂಯ ಭಾರಧ್ವಜ್ ಅವರು ಸದ್ಯ ಶೂಟಿಂಗ್‌ನಿಂದ ಬಿಡುವು ಪಡೆದು ವಿಶ್ರಾಂತಿಯಲ್ಲಿದ್ದಾರೆ. ಇತ್ತೀಚೆಗೆ ಕುಟುಂಬ ಸಮೇತ ವಿಹಾರಕ್ಕೆ ತೆರಳಿದ್ದಾರೆ. ಸಿಕ್ಕಿಂನ ನೈಸರ್ಗಿಕ ಸೌಂದರ್ಯವನ್ನು ಅನಸೂಯ ಸವಿಯುತ್ತಿದ್ದಾರೆ. ಬುಡಕಟ್ಟು ಜನರು ವಾಸಿಸುವ ಬೆಟ್ಟಗಳಲ್ಲಿ ಮೀನುಗಾರಿಕೆ ಮತ್ತು ಚಾರಣವನ್ನು ಆನಂದಿಸುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅನಸೂಯ, ಇನ್ನೊಂದು ದಿನ.. ಮತ್ತೊಂದು ಟ್ರೆಕ್.. ಮತ್ತೊಂದು ಸುಂದರವಾದ ಮೌಂಟೇನ್ ಫಾರೆಸ್ಟ್ ಫಾಲ್ಸ್ ಮತ್ತು ಸ್ಟ್ರೀಮ್ ಹಾಗೂ ಮತ್ತೊಂದು ನೆನಪುಗಳ ಗುಚ್ಛ ಎಂದು ಬರೆದುಕೊಂಡಿದ್ದಾರೆ.