LATEST NEWS
ಕಾಂತಾರವನ್ನು ಮನಸಾರೆ ಹೊಗಳಿದ ಸ್ವೀಟಿ ಅನುಷ್ಕಾಶೆಟ್ಟಿ….!!

ಮಂಗಳೂರು ಅಕ್ಟೋಬರ್ 16: ಸಿನೆಮಾ ಬಿಡುಗಡೆಯಾದ ಬಳಿಕ ದೇಶದಾದ್ಯಂತ ಸಂಚಲನ ಮೂಡಿಸಿರುವ ಕಾಂತಾರ ಸಿನೆಮಾವನ್ನು ಇದೀಗ ಬಾಹುಬಲಿ ನಟಿ ಕರಾವಳಿ ಮೂಲದ ಅನುಷ್ಕಾ ಶೆಟ್ಟಿ ನೋಡಿ ಮನಸಾರೆ ಹೋಗಳಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾಕ್ಕೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರ ಭಾಷಾ ನಟ –ನಟಿಯರು ಸೇರಿದಂತೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ಸ್ಟಾರ್ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿ ಅವರಿಗೂ ‘ಕಾಂತಾರ’ ಸಖತ್ ಇಷ್ಟವಾಗಿದೆ. ಸಿನಿಮಾ ವೀಕ್ಷಿಸಿದ ಬಳಿಕ ಅವರು ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ತಿಳಿಸಿದ್ದಾರೆ. ‘ಕಾಂತಾರ’ ಸಿನಿಮಾ ನೋಡಿದೆ. ಪೂರ್ತಿಯಾಗಿ ಈ ಚಿತ್ರ ನನಗೆ ಇಷ್ಟ ಆಯ್ತು. ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಸೇರಿ ಇಡೀ ತಂಡಕ್ಕೆ ಅಭಿನಂದನೆಗಳು. ಈ ಅನುಭವ ನೀಡಿದ್ದಕ್ಕಾಗಿ ಧನ್ಯವಾದಗಳು. ರಿಷಬ್ ಶೆಟ್ಟಿ ನೀವು ಅಮೇಜಿಂಗ್. ಎಲ್ಲವೂ ಈ ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಿ’ ಎಂದು ಅನುಷ್ಕಾ ಕೊಂಡಾಡಿದ್ದಾರೆ.