DAKSHINA KANNADA
ಉಪ್ಪಿನಂಗಡಿ ಹಿಜಬ್ ವಿವಾದ – ಮತ್ತೊಂದು ವಿಧ್ಯಾರ್ಥಿನಿ ಅಮಾನತು…!!

ಮಂಗಳೂರು: ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಬ್ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದೀಗ ಹಿಜಬ್ ಧರಿಸಿ ಬಂದ ಮತ್ತೊಬ್ಬ ವಿಧ್ಯಾರ್ಥಿನಿಯನ್ನು ಕಾಲೇಜು ಅಮಾನತುಗೊಳಿಸಿದೆ.
ಉಪ್ಪಿನಂಗಡಿ ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಬ್ ಗಲಾಟೆ ನಡುವೆ ನಿನ್ನೆ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಸಭೆ ಪುತ್ತೂರು ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಸಭೆ ನಡೆದಿದೆ. ಮೇ 28 ರಂದು ಅಮಾನತುಗೊಂಡಿರುವ ಹುಡುಗಿಯರು ತಮ್ಮ ಪೋಷಕರೊಂದಿಗೆ ಶನಿವಾರ ಕಾಲೇಜಿಗೆ ಬರಬಹುದು. ಅವರು ತಮ್ಮ ವರ್ತನೆಗೆ ಕ್ಷಮೆಯಾಚಿಸಬೇಕು ಮತ್ತು ಅದನ್ನು ಪುನರಾವರ್ತಿಸುವುದಿಲ್ಲ ಎಂದು ಲಿಖಿತವಾಗಿ ಭರವಸೆ ನೀಡಬೇಕು. ನಂತರ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಾಗುವುದು ಎಂದು ಶಾಸಕರು ತಿಳಿಸಿದರು. ಅಲ್ಲದೆ ಅವರು ಕಾಲೇಜಿನ ನಿಯಮಗಳಿಗೆ ಬದ್ಧರಾಗಿರಬೇಕೆಂದು ತಿಳಿಸಲಾಗಿದೆ.

ಈ ನಡುವೆ ಹಿಜಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದಕ್ಕೆ ಮತ್ತೊಬ್ಬ ವಿಧ್ಯಾರ್ಥಿನಿಯನ್ನು ಅಮಾನತುಗೊಳಿಸಿದೆ. ವಿದ್ಯಾರ್ಥಿಗಳು ಉಲ್ಲಂಘನೆಯನ್ನು ಪುನರಾವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಸಿಡಿಸಿ ನಿರ್ಧರಿಸಿದೆ ಎಂದು ಶಾಸಕರು ತಿಳಿಸಿದ್ದಾರೆ.