Connect with us

    LATEST NEWS

    ಅತೀ ವೇಗಕ್ಕೆ ಸೀದಾ ಟ್ರಾನ್ಸ್ ಫಾರ್ಮರ್ ಏರಿದ ಬೈಕ್

    ಕೇರಳ ಜೂನ್ 04: ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್ ಏರಿದ ಘಟನೆ ಕೇರಳದ ಇಡುಕಿಯ ವೆಲ್ಲಾಯಕುಂಡಿಯಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.


    ಬೈಕ್ ಸವಾರ ವಿಷ್ಣುಪ್ರಸಾದ್ ಈ ಅನಾಹುತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈತ ತನ್ನ ಗೆಳೆಯ ಬೈಕ್ ನ್ನು ಅತಿ ವೇಗದಲ್ಲಿ ಓಡಿಸಿಕೊಂಡು ಬಂದಿದ್ದಾನೆ. ಈ ಸಂದರ್ಭ ಈ ವೇಳೆ ಬೈಕ್ ಆತನ ನಿಯಂತ್ರಣ ತಪ್ಪಿ ಆತ ಒಂದು ಕಡೆ ಬಿದ್ದಿದ್ದಾರೆ ಬೈಕ್ ಮೂರು ಪಲ್ಟಿ ಹೊಡೆದು ಟ್ರಾನ್ಸ್‌ಫಾರ್ಮರ್‌ ಏರಿದೆ. ಘಟನೆಯ ಬಳಿಕ ಆತ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಘಟನೆಯ ಬಳಿಕ ಕೇರಳ ವಿದ್ಯುತ್‌ ಬೋರ್ಡ್‌ನ ಅಧಿಕಾರಿಗಳು ವಿದ್ಯುತ್ ಸ್ಥಗಿತಗೊಳಿಸಿ ಹೆಚ್ಚಿನ ಅನಾಹುತವಾಗದಂತೆ ತಡೆದಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply