KARNATAKA
ಬೆಂಗಳೂರಿನಲ್ಲಿ ಮತ್ತೊಂದು ಕೊಲೆ, ಕಿರಿಕ್ ಕೀರ್ತಿಯನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳ ತಂಡ..!

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಕೊಲೆ, ಗಲಭೆ, ಅಪರಾಧಗಳ ತಾಣವಾಗುತ್ತಿದೆ. ಬೆಂಗಳೂರು ನಗರದ ಹೊರಮಾವಿನಲ್ಲಿ ಯುವಕನೋರ್ವನನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ.
ಕೀರ್ತಿ ಅಲಿಯಾಸ್ ಕಿರಿಕ್ ಕೀರ್ತಿ (28) ಬರ್ಬರವಾಗಿ ಕೊಲೆಯಾದ ಯುವಕನಾಗಿದ್ದಾನೆ. ಕೌಟುಂಬಿಕ ಕಲಹದಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಕೃತ್ಯ ನಡೆಸಿದ ಆರೋಪದ ಮೇರೆಗೆ ಕಿಶೋರ್, ನಿರ್ಮಲ್, ವೆಂಕಟರಾಜು ಹಾಗೂ ಸಂತೋಷ್ ಎಂಬುವರನ್ನು ಬಂಧಿಸಲಾಗಿದೆ . ‘ಕೀರ್ತಿ ಸಂಬಂಧಿ ಮಹಿಳೆಯೊಬ್ಬರ ಜೊತೆಗೆ ಕಿಶೋರ್ ಅಸಭ್ಯವಾಗಿ ವರ್ತಿಸಿದ್ದ. ಇದರ ಮಾಹಿತಿ ತಿಳಿದಿದ್ದ ಕೀರ್ತಿ, ಕಿಶೋರ್‌ಗೆ ಎಚ್ಚರಿಕೆ ನೀಡಿದ್ದ. ಈ ರೀತಿಯ ವರ್ತನೆ ಮುಂದುವರಿಸದಂತೆ ಬೆದರಿಕೆ ಸಹ ಹಾಕಿದ್ದ. ಇದರಿಂದ ಆಕ್ರೋಶಗೊಂಡ ಕಿಶೋರ್ ಕೊಲೆಗೆ ಸಂಚು ರೂಪಿಸಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಾನೂನು ಹಾಗೂ ಪೊಲೀಸರ ಭಯವಿಲ್ಲದೇ ನಡುರಸ್ತೆಯಲ್ಲೇ ರಕ್ತದೋಕುಳಿ ಹರಿಸುತ್ತಿದ್ದು ಜನ ಭಯಭೀತರಾಗಿದ್ದಾರೆ.
