LATEST NEWS
ಜಿಲ್ಲೆಯಲ್ಲಿ ಮತ್ತೊಂದು ಶಂಕಿತ ಲವ್ ಜಿಹಾದ್ ಪ್ರಕರಣ ಬೆಳಕಿಗೆ

ಜಿಲ್ಲೆಯಲ್ಲಿ ಮತ್ತೊಂದು ಶಂಕಿತ ಲವ್ ಜಿಹಾದ್ ಪ್ರಕರಣ ಬೆಳಕಿಗೆ
ಮಂಗಳೂರು ಜನವರಿ 1: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರಿನಲ್ಲಿ ಕಾನೂನು ಪದವಿ ವಿಧ್ಯಾರ್ಥಿನಿಯೊಬ್ಬಳು ನಾಪತ್ತೆ ಯಾಗಿರುವ ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದ್ದು ಈ ಪ್ರಕರಣವನ್ನು ಹಿಂದೂಪರ ಸಂಘಟನೆಗಳು ಎನ್ ಐಎಗೆ ವಹಿಸುವಂತೆ ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಿದೆ.
ಕೇರಳ ಕಾಸರಗೋಡಿನ ಹಿಂದೂ ಸಂಘಟನೆಯ ಮುಖಂಡರೊಬ್ಬರ ಪುತ್ರಿ, ಮಂಗಳೂರಿನಲ್ಲಿ ಕಾನೂನು ಪದವಿ ಓದುತ್ತಿರುವ ವಿಧ್ಯಾರ್ಥಿನಿ ರೇಷ್ಮಾ ಕಳೆದ 5 ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಮುಂಬೈನ ಮನ್ ಖುರ್ದ್ ನಿವಾಸಿಯಾಗಿರುವ ಇಕ್ಬಾಲ್ ಎಂಬ ಯುವಕನೊಂದಿಗೆ ರೇಷ್ಮಾ ಕಾಣೆಯಾಗಿರುವ ಶಂಕೆಯನ್ನು ಹೆತ್ತವರು ವ್ಯಕ್ತಪಡಿಸಿದ್ದು. ಇದು ಇನ್ನೊಂದು ಲವ್ ಜಿಹಾದ್ ಪ್ರಕರಣ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿವೆ.

ಕಾಸರಗೋಡಿನ ಹಿಂದೂ ಸಂಘಟನೆಯೊಂದರ ಮುಖಂಡರ ಪುತ್ರಿ ರೇಷ್ಮಾ ಮಂಗಳೂರಿನಲ್ಲಿ ಕಾನೂನು ಪದವಿ ಓದುತ್ತಿದ್ದಾರೆ. ಮುಂಬೈನ ಮನ್ ಖರ್ದ್ ಎಂಬಲ್ಲಿ ವಾಸಿಸುತ್ತಿರುವ ಇಕ್ಬಾಲ್ ಚೌಧರಿ ಎಂಬವರ ಜೊತೆ 3 ವರ್ಷಗಳ ಹಿಂದೆ ಫೆಸ್ಪುಕ್ ನಲ್ಲಿ ಪರಿಚಯವಾಗಿತ್ತು. ಈ ನಡುವೆ ಕಳೆದ 5 ತಿಂಗಳಿನವಿಂದ ರೇಷ್ಮಾ ಕಾಣೆಯಾಗಿದ್ದು ಇಕ್ಬಾಲ್ ರೇಷ್ಮಾಳನ್ನು ಪುಸಲಾಯಿಸಿ ಮುಂಬೈಗೆ ಕರೆದೊಯ್ದಿದ್ದಾನೆ ಎಂದು ರೇಷ್ಮಾ ಹೆತ್ತವರು ಆರೋಪಿಸಿದ್ದಾರೆ.ಈ ಸಂಬಂಧ ರೇಷ್ಮಾ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಈ ನಡುವೆ ಇತ್ತೀಚೆಗೆ ಮಂಗಳೂರಿಗೆ ಬಂದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಬಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ಮನವಿಯನ್ನು ನೀಡಿದ್ದು ಈ ಮನವಿಯಲ್ಲಿ ರೇಷ್ಮಾ ನಾಪತ್ತೆ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ಇದು ಇನ್ನೊಂದು ಲವ್ ಜಿಹಾದ್ ಪ್ರಕರಣವಾಗಿದ್ದು ಈ ಕೂಡಲೇ ಈ ಪ್ರಕರಣವನ್ನು ಎನ್ಐಎಗೆ ನೀಡಬೇಕೆಂದು ಮನವಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಇತ್ತೀಚೆಗೆ ಶಂಕಿತ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಪ್ರಕರಣ ಮತ್ತಷ್ಟು ಕುತೂಹಲ ಸೃಷ್ಠಿಸಿದೆ.